ಕರೋನಾ ಅವ್ಯವಹಾರ ವರದಿ: ನಂದೇನು ತಪ್ಪಿಲ್ಲ ಎಂದ ಡಾ.ಕೆ. ಸುಧಾಕರ್
ಬೆಂಗಳೂರು: ಕರೋನಾ ನಿರ್ವಹಣೆಯಲ್ಲಿ ನಾನು ಯಾವುದೇ ಅವ್ಯವಹಾರ ನಡೆಸಿಲ್ಲ, ಹೀಗಾಗಿ, ಯಾವುದೇ ಆರೋಪವನ್ನು ಕಾನೂನು ಮತ್ತು ರಾಜಕೀಯವಾಗಿ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕೋವಿಡ್ ಹಗರಣಗಳ ಸಂಬAಧ ನಿವೃತ್ತ ನ್ಯಾ.ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದ ಆಯೋಗದಿಂದ ಮಧ್ಯಂತರ ವರದಿ ನೀಡಲಾಗಿದೆ. ಎಲ್ಲ ಸೇರಿ ಗುಣಾಕಾರ, ಭಾಗಾಕಾರ ಎಲ್ಲ ಮಾಡಿದ್ದಾರೆ. ನಾನು ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿತ್ತು. ಯಾವುದೇ ತೀರ್ಮಾನವಿದ್ದರೂ ಅದರ ಮೂಲಕವೇ ತೆಗೆದುಕೊಳ್ಳುತ್ತಿದ್ದೆವು” ಎಂದು ತಿಳಿಸಿದರು.
ನಾನು ಅಧಿಕೃತ ವರದಿ ನೋಡುವವರೆಗೂ ಮಾತಾಡಲ್ಲ. ನಾನು ಇದನ್ನು ಎದುರಿಸುತ್ತೇನೆ. ನಾನು ಆತ್ಮವಂಚನೆ ಮಾಡಿಕೊಳ್ಳದೇ, ನನ್ನ ಪ್ರಾಣ ಒತ್ತೆ ಇಟ್ಟು ಊಟ, ತಿಂಡಿ ಮರೆತು, ಹಗಲಿರುಳು ರೋಗಿಗಳ ಸೇವೆ ಮಾಡಿದ್ದೇನೆ. ”ಇವರೆಲ್ಲ ಸತ್ಯ ಹರಿಶ್ಚಂದ್ರರಾ? ಇವರ ಸರ್ಕಾರ ದರೋಡೆಕೋರರ ಸರ್ಕಾರ. ಎಲ್ಲ ಇಲಾಖೆಗಳಲ್ಲೂ ಅಕ್ರಮ ಮಾಡುತ್ತಿದ್ದಾರೆ. ಕೋವಿಡ್ ಕಾಲದಲ್ಲಿ ಖರೀದಿ ಆಗಿರುವುದೇ ೭ ಸಾವಿರ ಕೋಟಿ ರೂ. ಮೌಲ್ಯದಷ್ಟು ವಸ್ತುಗಳು. ಅಕ್ರಮವೂ ಅಷ್ಟೇ ಆಗಿದೆ ಎಂದರೆ ನಂಬಲು ಸಾಧ್ಯವೇ? ಎಂದು ಸುಧಾಕರ್ ತಿಳಿಸಿದರು.
”ನ್ಯಾ.ಕುನ್ಹಾ ಅವರು ಅಂತಿಮ ವರದಿಯನ್ನೂ ಕೊಡಲಿ. ಇನ್ನೂ ೬ ತಿಂಗಳು ಕಾಲಾವಕಾಶ ತಗೊಂಡಿದ್ದಾರAತೆ. ಈ ಸವಾಲನ್ನು ನಾನು ಸ್ವೀಕಾರ ಮಾಡ್ತೇನೆ, ಎದುರಿಸ್ತೇನೆ. ಅದನ್ನು ಎಂಜಾಯ್ ಮಾಡುತ್ತೇನೆ. ಹೊಸ ಪರಂಪರೆ ಶುರು ಮಾಡಿದ್ದಾರೆ, ಮಾಡಲಿ” ಎಂದು ಡಾ.ಕೆ.ಸುಧಾಕರ್ ಸರ್ಕಾರದ ನಿರ್ಧಾರವನ್ನು ಟೀಕಿಸಿದರು.


