ಅಪರಾಧ ಸುದ್ದಿ

ಗೃಹ ಸಚಿವರ ಮನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಔತಣಕೂಟ

Share It

ಬೆಂಗಳೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರನ್ನು ಸದಾಶಿವನಗರದ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಶುಭಾಶಯ ಕೋರಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಡಿಜಿಪಿ ಎಂ.ಎ. ಸಲೀಂ, ಮಾಲಿನಿ ಕೃಷ್ಣಮೂರ್ತಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಎಡಿಜಿಪಿಗಳಾದ ಆರ್. ಹಿತೇಂದ್ರ, ಹೇಮಂತ್ ನಿಂಬಾಳ್ಕರ್, ಅಲೋಕ್ ಕುಮಾರ್, ಸೀಮಂತ್ ಕುಮಾರ್ ಸಿಂಗ್, ಉಮೇಶ್, ಶರತ್‌ಚಂದ್ರ ಮುಂತಾದವರು ಇದ್ದರು‌.

ಇದೇ ವೇಳೆ ತಮ್ಮ ನಿವಾಸದಲ್ಲಿ ಪರಮೇಶ್ವರ್ ಅವರು ಪೊಲೀಸ್ ಅಧಿಕಾರಿಗಳಿಗೆ ಉಪಹಾರಕೂಟ ಏರ್ಪಡಿಸಿದ್ದರು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಫೋಟೋ ಶೂಟ್ ಮಾಡಲಾಯಿತು.

ಡಿಜಿಪಿ ಅಲೋಕ್ ಮೋಹನ್, ಪೊಲೀಸ್ ಆಯುಕ್ತ ದಯಾನಂದ್, ಹಿರಿಯ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಹರಿಶೇಖರನ್, ಪ್ರಣವ್ ಮೊಹಂತಿ, ಅನುಚೇತ್, ದೇವರಾಜ್, ಅಲೋಕ್ ಕುಮಾರ್, ಮಾಲಿನಿ ಕೃಷ್ಣಮೂರ್ತಿ ಸೇರಿ ಹಲವರ ಜತೆ ಗ್ರೂಪ್ ಫೊಟೋ ತೆಗೆಸಿಕೊಂಡರು


Share It

You cannot copy content of this page