ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ವಿವಿಧ ಪ್ರಕರಣಗಳಲ್ಲಿ ಹೋರಾಟ ನಡೆಸುವ ಸಂಬAಧ ಬಿಜೆಪಿ ಹೆಜ್ಜೆಯನ್ನಿಟ್ಟಿದ್ದು, ಇದಕ್ಕಾಗಿ ಆಂದೋಲನ ಸಮಿತಿಯೊಂದನ್ನು ರಚನೆ ಮಾಡಿದೆ.
ಶಾಸಕರಾದ ಅರಗ ಜ್ಞಾನೇಂದ್ರ, ಮತ್ತಿಕೋಡ, ಭಾರತೀ ಶೆಟ್ಟಿ, ಬಸವರಾಜ ತೇಲ್ಕೂರ, ಬಿಜೆಪಿ ಉಪಾಧ್ಯಕ್ಷ ಎನ್ ಮಹೇಶ್ ಸೇರಿದಂತೆ ೧೭ ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡಾ ಹಗರಣ, ವಾಲ್ಮಿಕಿ ನಿಗಮದಲ್ಲಿನ ಭ್ರಷ್ಟಾಚಾರ ಹಗರಣ ಸೇರಿದಂತೆ ವಿವಿಧ ಪ್ರಕರಣದಲ್ಲಿ ಹೋರಾಟ ಮಾಡಲು ಸಮಿತಿ ರಚನೆ ಮಾಡಲಾಗಿದೆ.
ಸಿ.ಟಿ ರವಿ ಬಂಧನ ಪ್ರಕರಣ, ಮುನಿರತ್ನ ವಿರುದ್ಧ ಮೊಟ್ಟೆ ಎಸೆತದಂತಹ ಪ್ರಕರಣಗಳಲ್ಲಿ ಸರಕಾರದ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಮಾಸ್ಟರ್ ಪ್ಲಾö್ಯನ್ ರೂಪಿಸಿಕೊಂಡಿದೆ. ಇದಕ್ಕಾಗಿ ಸಮಿತಿ ರಚನೆ ಮಾಡಿ, ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ನಡೆಸುತ್ತಿದೆ. ಹೋರಾಟ ರೂಪಿಸುವ ಸಲುವಾಗಿಯೇ ಆಂದೋಲನ ಸಮಿತಿ ರಚನೆ ಮಾಡಲಾಗಿದೆ.