ಅಪರಾಧ ಸುದ್ದಿ

ಭೀಕರ ಅಪಘಾತಕ್ಕೆ ಇಬ್ಬರು ಬಲಿ

Share It

ಬೆಳಗಾವಿ : ಭೀಕರ ಅಪಘಾತಕ್ಕೆ ಇಬ್ಬರು ಬಲಿಯಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

24 ವರ್ಷದ ಯೋಗೇಶ್ ಸಂಭಾಜೀ ನಾವಿ ಹಾಗೂ 27 ವರ್ಷದ ನಿತೇಶ ವೈಜು ತರಳೆ ಅವರು ಬುಧವಾರ ಅಗಸಗಿ ಬಳಿಯ ಕಡಿಮಿಶನ್ ಮಧ್ಯೆ ಇರುವ ತಿರುವಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಭೀಕರವಾಗಿ ಮೃತಪಟ್ಟಿದ್ದಾರೆ.

ಇಬ್ಬರೂ ಸಹ ಅವಿವಾಹಿತರಾಗಿದ್ದರು. ಕ್ಷೌರಿಕ ಯೋಗೇಶ್ ಹಾಗೂ ಗ್ಯಾರೇಜ್ ಕೆಲಸ ಮಾಡುತ್ತಿದ್ದ ನಿತೇಶ ಎರಡು ಕುಟುಂಬವರಿಗೆ ಇವರು ಒಬ್ಬೊಬ್ಬರೇ ಪುತ್ರರಾಗಿದ್ದು, ಎರಡು ಕುಟುಂಬದವರಿಗೆ ಆಸರೆಯಾಗಿದ್ದರು.

ಅಪಘಾತ ಅಂಬೇವಾಡಿ ಗ್ರಾಮಸ್ಥರಿಗೆ ಊಹಿಸಲಾಗದಂತಹ ಘಟನೆಯಾದಂತಾಗಿದೆ. ಮೃತ ಯುವಕರ ಕುಟುಂಬವರ ಆಕ್ರಂದನ ಮುಗಿಲು ಮುಟ್ಟಿದೆ. ಇವರಿಬ್ಬರ ದೇಹವನ್ನು ಶವಪರೀಕ್ಷೆಗಾಗಿ ಕಾಕತಿ ಪೊಲೀಸರು ಜಿಲ್ಲಾಸ್ಪತ್ರೆಗೆ ಸಾಗಿಸಿ ಮುಂದಿನ ತನಿಖೆ ಕೈಕೊಂಡಿದ್ದಾರೆ.

ಗುರುವಾರ ಇವರ ಅಂತ್ಯಕ್ರಿಯೆ ಅಂಬೇವಾಡಿ ಗ್ರಾಮದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page