ಹೈಸ್ಕೂಲ್ ವಿದ್ಯಾರ್ಥಿನಿ ಮೇಲೆ ಮೂವರು ಶಿಕ್ಷಕರಿಂದಲೇ ಸಾಮೂಹಿಕ ಅತ್ಯಾಚಾರ
ಚೆನ್ನೈ:ಹೈಸ್ಕೂಲ್ ವಿದ್ಯಾರ್ಥಿಯ ಮೇಲೆ ಶಾಲೆಯ ಶಿಕ್ಷಕರೇ ಅತ್ಯಾಚಾರ ನಡೆಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
13 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಳೆದ ಒಂದು ತಿಂಗಳಿಂದ ಶಾಲೆಗೆ ಗೈರಾಗಿದ್ದಳು. ಈ ಬಗ್ಗೆ ವಿಚಾರಣೆ ನಡೆಸಿದ ಪ್ರಿನ್ಸಿಪಾಲ್ ಆಕೆಯ ಮನೆಗೆ ತೆರಳಿ ಕಾರಣ ವಿವರಿಸಿದರು. ಆಗ ವಿದ್ಯಾರ್ಥಿನಿ ನಡೆದ ಘಟನೆಯನ್ನು ವಿವರಿಸಿದ್ದು, ಮೂವರು ಶಿಕ್ಷಕರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದನ್ನು ಹೇಳಿಕೊಂಡಿದ್ದಾಳೆ.
ಆವರೆಗೆ ಯುವತಿ ಪೋಷಕರ ಬಳಿಯೂ ಈ ವಿಷಯ ತಿಳಿಸಿರಲಿಲ್ಲ ಎನ್ನಲಾಗಿದೆ. ಅನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮೂವರು ಶಿಕ್ಷಕರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಶಿಕ್ಷಕರ ವಿರುದ್ಧ ಪೋಷಕರು ಹಾಗೂ ಸಂಘಟನೆಗಳು ಕಿಡಿಕಾರಿದ್ದು ಕಠಿಣ ಶಿಕ್ಷೆಯ ಒತ್ತಾಯ ಮಾಡಿವೆ.
Updating…


