ಬೆಂಗಳೂರು: ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಅಪಾರ್ಟ್ಮೆಂಟ್ ವೊಂದರ ಮಾಲೀಕನ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಸಂಜಯನಗರದಲ್ಲಿ ನಡೆದಿದೆ.
ಸಂಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್‌ವೊAದರಲ್ಲಿ ಯುವತಿಗೆ ಅಪಾರ್ಟ್ಮೆಂಟ್ ಮಾಲೀಕನ ಪುತ್ರ ಬೆದರಿಕೆ ಹಾಕಿ, ಹಲ್ಲೆಗೆ ಮುಂದಾಗಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಸಂಬAಧ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬAಧ ಮಂಜುನಾಥ್ ಗೌಡನ ಬಂಧನ ಮಾಡಲಾಗಿದೆ.
ಮಂಜುನಾಥ್ ಗೌಡ ಈ ಹಿಂದೆ ಹೋಯ್ಸಳ ಸಿಬ್ಬಂದಿ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಪದೇಪದೆ ಇದೇ ರೀತಿ ಕಿರಿಕಿರಿ ಮಾಡಿಕೊಳ್ಳುವುದನ್ನೇ ರೂಢಿ ಮಾಡಿಕೊಂಡಿರುವ ಮಂಜುನಾಥ್ ಗೌಡ ವಿರುದ್ಧ ಅನೇಕ ಆರೋಪಗಳಿವೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.