ಶಿವಮೊಗ್ಗ : ಮಾದಕ ವಸ್ತು ಗಾಂಜಾ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಜಿಲ್ಲಾ ಪೊಲೀಸರು ಕೇವಕ 21 ದಿನದಲ್ಲಿ 5. 56 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡು 79 ಜನರ ವಿರುದ್ಧ 61 ಪ್ರಕರಣ ದಾಖಲಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಜಿ ಕೆ ಮಿಥುನ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದರು.
ಒಟ್ಟು 15 ಕೆ.ಜಿ 363 ಗ್ರಾಂ ತೂಕದ ಗಾಂಜಾ ವಶ ಪಡಿಸಿ ಕೊಳ್ಳ ಲಾಗಿದೆ. ಜಿಲ್ಲೆಯಾದ್ಯಂತ ಮಾದಕ ವಸ್ತು ಗಾಂಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.
ವಶಪಡಿಸಿಕೊಂಡ ಗಾಂಜಾ ಸುಮಾರು 15 ಕೆಜಿ 363 ಗ್ರಾಮ್ ಆಗಿದೆ. ಒಟ್ಟೂ 61 ಪ್ರಕರಣದಲ್ಲಿ ಗಾಂಜಾ ಸೇವನೆಯ 64, ಗಾಂಜಾ ಮಾರಾಟ ಮತ್ತು ಸಾಗಾಟದ 6 ಹಾಗೂ ಗಾಂಜಾ ಬೆಳೆಯ ಒಂದು ಪ್ರಕರಣ ಸೇರಿದೆ ಎಂದ ಅವರು, ಇವರೆಲ್ಲರ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಮಾದಕ ದ್ರವ್ಯ ಗಾಂಜಾ ಮಾರಾಟ, ಸೇವನೆ ಮತ್ತು ಗಾಂಜಾ ಬೆಳೆಯುತ್ತಿರುವ ಬಗ್ಗೆ ಮಾಹಿತಿ ಇದ್ದಲಿ ಹತ್ತಿರದ ಪೊಲೀಸ್ ಠಾಣೆ / 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ, ಅಂತಹವರ ವಿರುದ್ಧ ಕಾನೂನು ರೀತಾ ಕ್ರಮ ಕೈಗೊಳ್ಳಲಾಗುವುದು ಮತ್ತು ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದರು.
ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಮತ್ತು ಕಾರ್ಯಪ್ಪ ಎ.ಜಿ, ಆಯಾ ಉಪ ವಿಭಾಗಗಳ ಪೊಲೀಸ್ ಉಪಾಧೀಕ್ಷಕರುಗಳ ಮೇಲ್ವಿಚಾರಣೆಯಲಿ ಪೊಲೀಸ್ ನಿರೀಕ್ಷಕರು ಮತ್ತು ಪೊಲೀಸ್ ಉಪ ನಿರೀಕ್ಷಕರು ಕಾರ್ಯಾಚರಣೆ ನಡೆಸಿದರು ಎಂದರು.