ಉಪಯುಕ್ತ ಸುದ್ದಿ

2025-26 ನೇ ಸಾಲಿನ ಶೇ. 5 ಆಸ್ತಿ ತೆರಿಗೆ ರಿಯಾಯಿತಿ ಅವಧಿ ಮೇ31 ರವರೆಗೆ ವಿಸ್ತರಣೆ

Share It

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2025-26 ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ದಿನಾಂಕ: 30-04-2025 ರ ಒಳಗಾಗಿ ಪಾವತಿಸುವ ಎಲ್ಲಾ ತೆರಿಗೆದಾರರಿಗೆ ಆಸ್ತಿತೆರಿಗೆ ಮೇಲೆ ಶೇ.5% ರಷ್ಟು ರಿಯಾಯಿತಿ ನೀಡಲಾಗಿರುತ್ತದೆ.

ಬಿಬಿಎಂಪಿ ಕಾಯ್ದೆ 2020 ರ ಪ್ರಕರಣ 144 (8) ರಲ್ಲಿ ಸರ್ಕಾರವು ಪಾಲಿಕೆಯ ಶಿಫಾರಸ್ಸಿನ ಮೇರೆಗೆ ಅಧಿಸೂಚನೆ ಮೂಲಕ ಯಾವುದೇ ಹಣಕಾಸು ವರ್ಷಗಳಿಗೆ ರಿಯಾಯಿತಿ ಅವಧಿಯನ್ನು ವಿಸ್ತರಿಸಬಹುದೆಂದು ಉಲ್ಲೇಖಿಸಲಾಗಿರುತ್ತದೆ. ಆದುದರಿಂದ 2025-26 ನೇ ಸಾಲಿನ ಆಸ್ತಿತೆರಿಗೆ ಶೇ. 5 % ರಷ್ಟು ರಿಯಾಯಿತಿ ಅವಧಿಯನ್ನು ದಿನಾಂಕ: 31-05-2025 ರವರೆಗೆ ವಿಸ್ತರಿಸಿ, 2025-26 ನೇ ಸಾಲಿನ ಆಸ್ತಿತೆರಿಗೆ ಪೂರ್ಣ ಪ್ರಮಾಣದಲ್ಲಿ ದಿನಾಂಕ: 31-05-2025 ರ ಒಳಗಾಗಿ ಪಾವತಿಸುವ ಎಲ್ಲಾ ತೆರಿಗೆದಾರರಿಗೆ ಆಸ್ತಿತೆರಿಗೆ ಮೇಲೆ ಶೇ.5 ರಷ್ಟು ರಿಯಾಯಿತಿ ನೀಡುವ ಸಂಬಂಧ ಮಾನ್ಯ ಆಡಳಿತಗಾರರ ನಡವಳಿಗಳಿಗೆ ಸರ್ಕಾರದ ಆದೇಶ ಕೋರಿ ಪ್ರಸ್ತಾವನೆ ಮಂಡಿಸಲಾಗಿತ್ತು. ಸದರಿ ಪ್ರಸ್ತಾವನೆಗೆ ಸರ್ಕಾರದಿಂದ ಆದೇಶ ನೀಡಿ ಅಧಿಸೂಚನೆ ಹೊರಡಿಸಲಾಗಿರುತ್ತದೆ.

ಸರ್ಕಾರದ ನಗರಭಿವೃದ್ಧಿ ಇಲಾಖೆಯ ಆದೇಶದ ಅನ್ವಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2025-26 ನೇ ಸಾಲಿನ ಆಸ್ತಿತೆರಿಗೆ ರಿಯಾಯಿತಿ ಅವಧಿಯನ್ನು ವಿಸ್ತರಿಸಿ, 2025-26 ನೇ ಸಾಲಿನ ಆಸ್ತಿತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ದಿನಾಂಕ:31-05-2025 ರ ಒಳಗಾಗಿ ಪಾವತಿಸುವ ಎಲ್ಲಾ ತೆರಿಗೆದಾರರಿಗೆ ಆಸ್ತಿತೆರಿಗೆಯ ಮೇಲೆ ಶೇ.5 ರಷ್ಟು ರಿಯಾಯಿತಿ ನೀಡಲಾಗಿದೆ.


Share It

You cannot copy content of this page