ಕಲಬುರಗಿ: ಕುವೈತ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ವಿಜಯಕುಮಾರ ಅಂತ್ಯ ಸಂಸ್ಕಾರವನ್ನು ಸ್ವಗ್ರಾಮ ಸರಸಂಬಾದಲ್ಲಿ ನೆರವೇರಿಸಲಾಯಿತು.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಸರಸಂಬಾ ಗ್ರಾಮಕ್ಕೆ ಮೃತ ವಿಜಯಕುಮಾರ ಮೃತದೇಹವನ್ನು , ತಡರಾತ್ರಿ ತರಲಾಯೊತು. ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿತು. ಮಗನ ಸಾವಿನಿಂದ ವಿಜಯಕುಮಾರ ಕುಟುಂಬದಲ್ಲಿ ದು:ಖ ಮಡುಗಟ್ಟಿದೆ.
ಕುವೈತ್ ನಲ್ಲಿ ಟ್ರಕ್ ಡ್ರೈವರ್ ಆಗಿ ದುಡಿದು, ಮನೆಗೆ ಹಣ ಕಳುಹಿಸುತ್ತಿದೆ ಮನೆಯ ಆಧಾರ ಸ್ತಂಭವಾಗಿದ್ದ ವಿಜಯಕುಮಾರ್ ನನ್ನು ಕಳೆದುಕೊಂಡ ಕುಟುಂಬ ಸದಸ್ಯರ ರೋಧನೆ ಮುಗಿಲು ಮುಟ್ಟಿದೆ.
ಇಡೀ ಸರಸಂಬಾ ಗ್ರಾಮದಲ್ಲಿಯೇ ಸ್ಮಶಾನ ಮೌನ ಆವರಿಸಿದ್ದು, ಗ್ರಾಮಸ್ಥರು ಕಂಬನಿ ಮಿಡಿದರು.

