ಉಪಯುಕ್ತ ಸುದ್ದಿ

ಭಾರತದಲ್ಲಿ ಹೆಚ್ಚು ಜನಸಂಖ್ಯೆವುಳ್ಳ ಜಿಲ್ಲೆ ಯಾವುದು ಗೊತ್ತಾ?ಎರಡನೇ ಸ್ಥಾನದಲ್ಲಿದೆ ಬೆಂಗಳೂರು!

Share It

ದೇಶದ ಬಹು ದೊಡ್ಡ ಆಸ್ತಿ ಮಾನವ ಸಂಪನ್ಮೂಲ ಎಂದು ಅರಿಸ್ಟಾಟಲ್ ಹೇಳುತ್ತಾರೆ. ಹಾಗೇ ಭಾರತವು ವಿಶ್ವದ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ. ಅಷ್ಟಕ್ಕೂ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆ ಯಾವುದು ಎಂಬುದು ನಿಮಗೆ ಗೊತ್ತಿದೆಯೇ ಆಗಿದ್ರೆ ಈ ಸ್ಟೋರಿ ಓದಿ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಣ್ಣ ಪುಟ್ಟ ಮಾಹಿತಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನವನ್ನು ತಿಳಿದುಕೊಳ್ಳುವ ಕಡೆಗೆ ಹೆಚ್ಚು ಗಮನವನ್ನು ವಹಿಸಬೇಕಿದೆ. ಭಾರತದಲ್ಲಿ ಉತ್ತರ ಪ್ರದೇಶವು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಎಂಬುದನ್ನು ನಾವು ಕೇಳಿದ್ದೇವೆ.

ನಮ್ಮ ಅಖಂಡ ಭಾರತದಲ್ಲಿ ಒಟ್ಟು 28 ಜಿಲ್ಲೆಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳು ಇವೆ. ಅದರಲ್ಲಿ ಒಟ್ಟು 806 ಜಿಲ್ಲೆಗಳು ಭಾರತದಲ್ಲಿ. ಆ ಪೈಕಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜೆಲ್ಲೆಯ ಬಗ್ಗೆ ತಿಳಿಯೋಣ. ಜಿಲ್ಲೆಗಳ ಸಂಖ್ಯೆ ಆಗಾಗ ಬದಲಾಗುತ್ತಿರುತ್ತದೆ. ನಮ್ಮಲ್ಲಿ ಹೊಸದಾಗಿ ಅನೇಕ ಜಿಲ್ಲೆಗಳನ್ನು ವಿಂಗಡನೆ ಮಾಡಬೇಕು ಎಂಬ ಕೂಗು ಅನೇಕ ದಿನಗಳಿಂದ ಇದೆ.

ಒಟ್ಟು ಜಿಲ್ಲೆಗಳ ಪೈಕಿ ಗುಜರಾತ್ ನ ಕಚ್ ಜಿಲ್ಲೆಯು ಭಾರತದ ದೊಡ್ಡ ಜಿಲ್ಲೆಯಾಗಿದೆ. ಈ ಜಿಲ್ಲೆಯು ಒಟ್ಟು 45,652 ಚದುರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಹಾಗೇ ಪಾಂಡಿಚೇರಿ ಯ ಮಾಹೆ ಜಿಲ್ಲೆಯು ಭಾರತದ ಅತ್ಯಂತ ಕಿರಿಯ ಜಿಲ್ಲೆಯಾಗಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆ ಭಾರತದ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಗಳ ಪೈಕಿ ಅಗ್ರಸ್ಥಾನದಲ್ಲಿದೆ. ಸದ್ಯ 2011 ರ ಜನಗಣತಿಯ ಪ್ರಕಾರ ಇಲ್ಲಿ 1 ಕೋಟಿ ಜನಸಂಖ್ಯೆಯು ಇತ್ತು.(1,00,09,781). ಸದ್ಯ ಇದು 1.2 ಕೋಟಿಗೆ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.

2011 ರ ಪ್ರಕಾರ ನಮ್ಮ ನೆರೆಯ ರಾಜ್ಯ ಮಹಾರಾಷ್ಟ್ರದ ಥಾಣೆ ಜಿಲ್ಲೆಯು ಅತಿ ದೊಡ್ಡ ಜಿಲ್ಲೆಯಾಗಿತ್ತು. ಬಳಿಕ 2014 ರಲ್ಲಿ ಈ ಜಿಲ್ಲೆಯನ್ನು ಎರಡು ಜಿಲ್ಲೆಗಳಾಗಿ ವಿಭಗಿಸಲಾಯಿತು. ಇದರಿಂದಾಗಿ ಹೆಚ್ಚು ಜನಸಂಖ್ಯೆಯ ಸ್ಥಾನ ಪಶ್ಚಿಮ ಬಂಗಾಳ ದ ಜಿಲ್ಲೆಗೆ ಸಿಕ್ಕಿತು. ಇದರ ತರುವಾಯ ನಮ್ಮ ಬೆಂಗಳೂರು ನಗರ ಜಿಲ್ಲೆ ಎರಡನೆಯ ಸ್ಥಾನದಲ್ಲಿ ಬರುತ್ತದೆ. 2011 ರಲ್ಲಿ 96 ಲಕ್ಷ ಇದ್ದ ಈ ಸಂಖ್ಯೆ ಈಗ 1 ಕೋಟಿಯನ್ನು ಮೀರಿದೆ ಎಂದು ಹೇಳಬಹುದು.

ಅದೇ ರೀತಿ ಭಾರತದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆ ಅರುಣಾಚಲ ಪ್ರದೇಶದ ದಿಬಾಂಗ್​ ವ್ಯಾಲಿ ಯಾಗಿದೆ. ಇಲ್ಲಿ 2011 ರ ಜನಗಣತಿಯ ಪ್ರಕಾರ 8004 ಮಂದಿ ಇದ್ದಾರೆ ಎಂದು ಹೇಳಲಾಗಿದೆ. ಇದು 9 ಸಾವಿರಕ್ಕೆ ಏರಿಕೆಯಾಗಿರಬಹುದು ಎಂದು ತಿಳಿದು ಬಂದಿದೆ.


Share It

You cannot copy content of this page