ದೆಹಲಿ ಪ್ರಿಮಿರ್ ಲೀಗ್ ನಲ್ಲಿ 6 ಬಾಲ್ ಗಳಲ್ಲಿ 6 ಸಿಕ್ಸರ್ ಸಿಕ್ಸರ್ ಸಿಡಿಸುವುದರ ಮೂಲಕ ತನ್ನ ಸ್ಪೋಟಕ ಬ್ಯಾಟಿಂಗ್ ಶೈಲಿಯಿಂದ ಕೇವಲ 50 ಬಾಲ್ ಗಳಲ್ಲಿಯೇ 120 ರನ್ ಗಳನ್ನು ಕಲೆ ಹಾಕಿದ ದೆಹಲಿಯ ಯುವ ಆಟಗಾರ ಪ್ರಿಯಂಶ್ ಆರ್ಯ ದಾಖಲೆ ನಿರ್ಮಿಸಿದರು.
ದಕ್ಷಿಣ ದೆಹಲಿಯ ಪರ ಬ್ಯಾಟ್ ಬೀಸಿದ ಪ್ರಿಯಂಶ್ ಆರ್ಯ ಎಡಗೈ ಸ್ಪಿನ್ನರ್ ಮನನ್ ಭಾರದ್ವಾಜ್ ಅವರ ಒಂದೇ ಓವರ್ ನಲ್ಲಿ 6 ಸಿಕ್ಸರ್ ಗಳನ್ನು ಸಿಡಿಸುವುದರ ಮೂಲಕ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಯುವ ಆಟಗಾರ ಪ್ರಿಯಂಶ್ ಆರ್ಯ ನಾನು ಐಪಿಎಲ್ 2025ರಲ್ಲಿ “ರಾಯಲ್ ಚಾಲೆಂಜರ್ಸ್ ಪರ ಆಡಲು ಇಚ್ಛಿಸುತ್ತೇನೆ, ಏಕೆಂದರೆ ನನಗೆ ವಿರಾಟ್ ಕೊಹ್ಲಿ ಎಂದರೆ ತುಂಬಾ ಇಷ್ಟ ಅವರೊಂದಿಗೆ ಆಟವಾಡುವುದು ನನ್ನ ಕನಸು” ಎಂದರು.
ನಂತರ ” ನಾನು ಮನನ್ ಭಾರದ್ವಾಜ್ ಅವರ ಓವರ್ ನ ಮೊದಲ ನಾಲ್ಕು ಬಾಲ್ ಗಳಲ್ಲಿ ನಾಲ್ಕು ಸಿಕ್ಸರ್ ಭಾರಿಸಿದಾಗ ನಾನ್ ಸ್ಟ್ರೈಕರ್ ನಲ್ಲಿ ನಿಂತಿದ್ದ ನಾಯಕ ಆಯುಷ್ ಬಡೋನಿ ನೀನು 6 ಬಾಲ್ ಗಳಲ್ಲಿ 6 ಸಿಕ್ಸರ್ ಗಳನ್ನು ಹೊಡಿ ಎಂದು ನನಗೆ ಸ್ಪೂರ್ತಿ ತುಂಬಿದರು “ಎಂದು ತಿಳಿಸಿದರು.
ಇನ್ನೇನು 2025ರ ಮೆಗಾ ಹರಾಜು ಸನಿಹದಲ್ಲಿರುವ ಕಾರಣ ದೆಹಲಿಯ ಯುವ ಪ್ರತಿಭೆಯನ್ನು ಯಾವ ತಂಡ ಖರೀದಿಸಿ ತನ್ನ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಿದೆ ಎಂದು ಕಾದು ನೋಡಬೇಕಾಗಿದೆ.