ಬೆಂಗಳೂರು: ಕೆಎಂಎಫ್ ಮತ್ತು ಟಿಟಿಡಿ ಒಪ್ಪಂದದಂತೆ ತಿರುಪತಿ ಲಡ್ಡುಗೆ ಇಂದಿನಿಂದ ನಂದಿನಿ ತುಪ್ಪದ ಸರಬರಾಜು ಆರಂಭವಾಗಲಿದೆ.
ಈಗಾಗಲೇ ತುಪ್ಪ ತುಂಬಿರುವ ಲಾರಿಗಳು ತಿರುಪತಿ ತಲುಪಿದ್ದು, ತಿರುಮಲ ಬೆಟ್ಟದ ಮೇಲಕ್ಕೆ ಪೂಜೆಯ ನಂತರ ಹೊರಡಲಿವೆ. ಅಲಿಪಿರಿಯ ಟಿಟಿಡಿ ಗೋಮಾದಿನ ಬಳಿ ಈಗಾಗಲೇ ತುಪ್ಪಸ ಟ್ಯಾಂಕ ರ್ ಗಳನ್ನು ನಿಲ್ಲಿಸಲಾಗಿದೆ.
ಟಿಟಿಡಿಯ ಕಾರ್ಯನಿರ್ವಣಾಧಿಕಾರಿ ಪೂಜೆ ಸಲ್ಲಿಸಿದ ನಂತರ ಅಲಿಪಿರಿಯಿಂದ ತಿರುಮಲ ಬೆಟ್ಟದ ಮೇಲಿನ ಪಾಕಶಾಲೆಗೆ ನಂದಿನಿ ತುಪ್ಪ ತುಂಬಿದ ಕೆಎಂಎಫ್ ಟ್ಯಾಂಕರ್ ಗಳು ಹೊರಡಲಿವೆ.
ತಿರುಪತಿ ಲಡ್ಡುವಿನ ಘಮ ತುಪ್ಪದಿಂದಲೇ ಹೆಚ್ಚಲಿದ್ದು, ಆ ಘಮಲಿಗೆ ಕರ್ನಾಟಕದ ನಂದಿನಿ ತುಪ್ಪ ಸೇರಿಕೊಳ್ಳಲಿದೆ. ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರಾದ ನಂದಿನಿ ತುಪ್ಪದಿಂದ ತಿರುಪತಿಯ ಲಡ್ಡಿನ ರುಚಿ ಮತ್ತಷ್ಟು ಹೆಚ್ಚಲಿದೆ.