ಸುದ್ದಿ

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಊರ ಜನರಿಗೆ ಬೋರ್ ವೆಲ್ ಕೊರೆಸಿ ಕೊಟ್ಟ ಅಭಿಮಾನಿ

Share It

ಬೆಳಗಾವಿ : ಖ್ಯಾತ ಚಲನಚಿತ್ರ ನಟ ಕಿಚ್ಚ ಸುದೀಪ್ ಅವರ 51 ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ತಮ್ಮ ಅಚ್ಚುಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಯೊಬ್ಬರು ವಿಶಿಷ್ಟವಾಗಿ ಆಚರಿಸಿದ್ದಾರೆ.
ಗ್ರಾಮಸ್ಥರಿಗೆ ತನ್ನ ಸ್ವಂತ ಹಣ ಖರ್ಚು ಮಾಡಿ ಬೋರ್ ವೆಲ್ ಕೊರೆಸುವ ಮೂಲಕ ಯುವಕ ಗಮನ ಸೆಳೆದಿದ್ದಾನೆ.

ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದ ಸುದೀಪ ಅವರ ಅಭಿಮಾನಿ ಆದಿನಾಯಕ್ ಎಂಬ ಯುವಕ ಬೋರ್ ವೆಲ್ ಕೊರೆಸಿದ್ದಾನೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಹಿನ್ನಲೆಯಲ್ಲಿ ಒಂದು ಲಕ್ಷ ರುಪಾಯಿ ಸ್ವಂತ ಹಣ ಖರ್ಚು ಮಾಡಿಸಿ ಬೋರ್ ವೆಲ್ ಕೊರೆಸಿದ್ದಾನೆ. ಬೋರ್ ವೆಲ್ ಆರಂಭಕ್ಕೂ ಮುನ್ನ ಕೇಕ್ ಕತ್ತರಿಸಿ ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿರುವುದು ಗಮನ ಸೆಳೆದಿದೆ.


Share It

You cannot copy content of this page