ತಾಯಿ ಆದ ಮಿಲನಾ ನಾಗರಾಜ್; ಖುಷಿ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಬೆಂಗಳೂರು: ನಟಿ ಮಿಲನಾ ನಾಗರಾಜ್ ಹೆಣ್ಣು ಮಗುವಿನ ಜನ್ಮ ನೀಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಡಾರ್ಲಿಂಗ್ ಕೃಷ್ಣ ಖುಷಿ ಹಂಚಿಕೊಂಡಿದ್ದಾರೆ.
ಯಾವ ಮಗು ಆದರೂ ಖುಷಿಯೇ, ಆದರೇ ಹೆಣ್ಣು ಮಗು ಆಗಿರುವುದು ಮತ್ತಷ್ಟು ಖುಷಿ ನೀಡಿದೆ. ತಾಯಿ ಮಗು ಇಬ್ಬರೂ ಆತೋಗ್ಯವಾಗಿದ್ದಾರೆ ಎಂದು ಹಂಚಿಕೊಂಡಿದ್ದಾರೆ.
ಮಿಲನಾ ನಾಗರಾಜ್ ಅವರನ್ನು ಡಾರ್ಲಿಂಗ್ ಕೃಷ್ಣ ಅವರು ಹೊಗಳಿದ್ದಾರೆ. ಅದೇ ರೀತಿ ಮಗಳು ಹುಟ್ಟಿದ್ದಕ್ಕೆ ಡಾರ್ಲಿಂಗ್ ಕೃಷ್ಣ ಅವರಿಗೆ ಸಾಕಷ್ಟು ಖುಷಿ ಆಗಿದೆ. ಹೆಣ್ಣು ಮಗು ಜನಿಸಬೇಕು ಎಂದು ಅವರ ಆಸೆ ಆಗಿತ್ತಂತೆ. ಈ ಆಸೆ ಈಡೇರಿದೆ ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. .


