ಕಡಪ: ಜೂನಿಯರ್ NTR ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯ ಸಿನಿಮಾ ‘ದೇವರ’ ಇವತ್ತು ಇಡೀ ಪ್ರಪಂಚದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಆಂಧ್ರಪ್ರದೇಶದ ಕಡಪದಲ್ಲಿರುವ ಅಪ್ಸರಾ ಥೀಯೇಟರ್ನಲ್ಲಿ ದೇವರ ಸಿನಿಮಾದಲ್ಲಿ NTR ಎಂಟ್ರಿಯಾಗುತ್ತಲೇ ಅತಿಯಾದ ಖುಷಿಯಿಂದ ಕೇಕೆ ಹಾಕುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ .
ಮೃತ ವ್ಯಕ್ತಿಯ ಹೆಸರು ‘ಮಾಸ್ತನ್ ಅಲಿ’ ಜೂನಿಯರ್ ಎನ್. ಟಿ. ಆರ್ ಅಪ್ಪಟ ಅಭಿಮಾನಿಯಾಗಿದ್ದನು. ಆತನ ಸ್ನೇಹಿತರು ಥೀಯೇಟರ್ನಿಂದ ಖಾಸಗಿ ಆಸ್ಪತ್ರೆಗೆ ಕರೆದೋಯ್ದಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ.
ಮೊದಲ ದಿನದಲ್ಲೇ ಸಲೀಸಾಗಿ 100ಕ್ಕೂ ಹೆಚ್ಚು ಕೋಟಿ ಗಳಿಸುವ ಎಲ್ಲಾ ಲಕ್ಷಣಗಳು ಇರುವ, ಪ್ರಪಂಚದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಸಮಯದಲ್ಲಿ ಇಂತಹ ಘಟನೆ ನಡೆದಿರುವುದು ತೆಲುಗು ಸಿನಿಮಾ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಮುಂದೆ ಹೃದಯ ಸಂಬಧಿ ಖಾಯಿಲೆ ಇರುವ ಪ್ರೇಕ್ಷಕರು ಅಭಿಮಾನಿಗಳು ಇಂತಹ ಘಟನೆ ಗಳಿಂದ ಎಚ್ಚೆತ್ತುಕೊಳ್ಳಬೇಕಿದೆ. ಇನ್ನೂ ಬಾಳಿ ಬದುಕಬೇಕಿದ್ದ ಯುವಕನ ಆಕಸ್ಮಿಕ ಸಾವು ಥೀಯೇಟರ್ನಲ್ಲಿ ಜರುಗಿರುವುದಕ್ಕೆ ದೇಶದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.