ಬೆಂಗಳೂರು: ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಪೂಜೆ ಮಾಡಿಸಲು ಬುಕ್ ಮಾಡಿ, ಕಾರಣಾಂತರದಿಂದ ಅದನ್ನು ಮುಂಡೂಡಲು ಇನ್ಮುಂದೆ ಅವಕಾಶ ನೀಡಲಾಗುತ್ತದೆ.
ಈ ಸಂಬಂಧ ಮುಜರಾಯಿ ಇಲಾಖೆ ಸುತ್ತೋಲೆಯೊಂದನ್ನು ಶೀಘ್ರದಲ್ಲೇ ಹೊರಡಿಸಲಿದ್ದು, ಬುಕ್ ಮಾಡಿದ ಸ್ಲಾಟ್ ಅನ್ನು ಮರುದಿನಕ್ಕೆ ಅಥವಾ ತಮಗೆ ಅಗತ್ಯವಾದ ದಿನಕ್ಕೆ ಮುಂದುವರಿಸಲು ಅವಕಾಶ ನೀಡಲು ತೀರ್ಮಾನಿಸಿದೆ.
ಈ ಹಿಂದೆ ಒಮ್ಮೆ ಸರ್ಪ ಸಂಸ್ಕಾರ ಪೂಜೆಗೆ ಸ್ಲಾಟ್ ಬುಕ್ ಮಾಡಿದರೆ, ಅದೇ ಸಮಯದಲ್ಲಿ ಪೂಜೆ ನಡೆಸಬೇಕಿತ್ತು. ಒಂದು ವೇಳೆ ಅ ಅವಧಿಯಲ್ಲಿ ಪೂಜೆ ಮಾಡಿಸಲು ಸಾಧಗಯವಾಗದಿದ್ದರೆ, ಅದನ್ನು ಮರುದಿನ ಅಥವಾ ಮುಂದಿನ ದಿನಕ್ಕೆ ಕ್ಯಾರಿ ಮಾಡಲು ಅವಕಾಶವಿರಲಿಲ್ಲ.
ಈ ಸಂಬಂಧ ಇಲಾಖೆಗೆ ಅನೇಕ ದೂರುಗಳು ಬಂದಿದ್ದು, ಇದರಿಂದ ಭಕ್ತಾದಿಗಳಿಗೆ ತೊಂದರೆ ಯಾಗುತ್ತಿದೆ ಎಂದು ವರದಿಯಾಗಿತ್ತು. ಹೀಗಾಗಿ, ಇದೀಗ ಮುಜರಾಯಿ ಇಲಾಖೆ ಪೂಜೆಯ ಅವಧಿಯನ್ನು ಮರುದಿನ ಅಥವಾ ಮುಂದಿನ ಅವಧಿಗೆ ಕ್ಯಾರಿ ಮಾಡಲು ಅವಕಾಶ ಒದಗಿಸಲು ಸಜ್ಜಾಗಿದೆ.