ಉಪಯುಕ್ತ ಫ್ಯಾಷನ್ ಸುದ್ದಿ

Velevet Saree Fashion: ವೆಲ್ವೆಟ್ ಸೀರೆ ಧರಿಸಿ ಸುಂದರವಾಗಿ ಕಾಣಬೇಕಾ ? ಆಗಿದ್ರೆ ಈ ಟ್ರಿಕ್ಸ್ ಬಳಸಿ !

Share It

ಸೀರೆ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ವಿವಿಧ ಬಣ್ಣ ಸೀರೆಗಳು ಅಂದ್ರೆ ತುಂಬ ಇಷ್ಟ ಪಡ್ತಾರೆ. ಆದ್ರೆ ಈಗ ವೆಲ್ವೆಟ್‌ ಸೀರೆ ಹೆಚ್ಚು ಟ್ರೆಂಡ್ ಗೆ ಬರುತ್ತಿದೆ. ಬಾಲಿವುಡ್ ನಟಿಯರಿಂದ ಹಿಡಿದು ಸ್ಯಾಂಡಲ್ ವುಡ್ ವರೆಗೆ ಅನೇಕ ನಟಿಯರು ಈ ಸೀರೆಯನ್ನು ಹಾಕಿಕೊಂಡು ಕಾಣಿಸಿಕೊಳ್ಳುತ್ತಿದ್ದಾರೆ. ಈಗ ನಟಿ ಮೇಘಾ ಶೆಟ್ಟಿ ಕೂಡ ಟೀಲ್‌ ಬ್ಲ್ಯೂ ಶೇಡ್‌ನ ವೆಲ್ವೆಟ್‌ ಸೀರೆ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ.

ಈ ವೆಲ್ವೆಟ್ ಸೀರೆಗಳು ನೋಡಲು ಸಿಂಪಲ್ ಆಗಿ ಆಕರ್ಷಕವಾಗಿ ಕಾಣುತ್ತವೆ. ಮತ್ತು ಚಳಿಗಾಲದಲ್ಲಿ ಬೆಚ್ಚಗಿಡುವ ಕಾರ್ಯ ಮಾಡುತ್ತದೆ. ಮೇಘಾ ಶೆಟ್ಟಿ ಉಟ್ಟಿರುವ ಈ ಸೀರೆಗೆ ಅವರ ಅಭಿಮಾನಿಗಳು ಹಾಗೂ ಇತರರು ಮನ ಸೋತಿದ್ದಾರೆ. ಅವರ ಈ ಸೀರೆಯ ಡಿಸೈನ್‌ ಹಾಗೂ ಸ್ಟೈಲಿಂಗ್‌ ಅನ್ನು ಡಿಸೈನರ್‌ ಲಕ್ಷ್ಮಿ ಕೃಷ್ಣ ಮಾಡಿದ್ದಾರೆ. ಆಕರ್ಷಕವಾಗಿ ಕಾಣಬಯಸುವ ಯುವತಿಯರಿಗೆ ಅವರು 5 ಸಲಹೆ ನೀಡಿದ್ದಾರೆ.

ರಾಯಲ್ ಲುಕ್ ಗಾಗಿ ವೆಲ್ವೆಟ್ ಸೀರೆಗಳು

ನೀವು ಕಾರ್ಯಕ್ರಮವೊಂದರಲ್ಲಿ ಎಲ್ಲರಿಗಿಂತಲೂ ವಿಭಿನ್ನವಾಗಿ ಹಾಗೂ ಆಕರ್ಷಕವಾಗಿ ಕಾಣಬೇಕಾದರೆ ಈ ಸೀರೆಯನ್ನು ತೊಡಿ.

ಚರ್ಮದ ಬಣ್ಣಕ್ಕೆ ತಕ್ಕಂತೆ ಸೀರೆಯ ಬಣ್ಣ

ನಿಮ್ಮ ಬಣ್ಣಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಿರಿ. ರಾತ್ರಿಯ ಕಾರ್ಯಕ್ರಮಗಳಿಗೆ ಹೋಗುವುದಾದರೆ ಡಾರ್ಕ್‌ ಶೇಡ್‌, ಬೆಳಗಿನ ಕಾರ್ಯಕ್ರಮಗಳಿಗೆ ಹೋಗುವುದಾದರೆ ಲೈಟ್‌ ಶೇಡ್ಸ್ ಹೀಗೆ ಆಯ್ಕೆ ಮಾಡಿಕೊಳ್ಳಿ. ಹಾಗೇ ನಿಮ್ಮಲ್ಲಿ ಲಭ್ಯವಿರುವಷ್ಟು ಆಕ್ಷೇರಿಸ್ ಅನ್ನು ಧರಿಸಬೇಕು.

ಸೀರೆ ಲೈಟ್ ಆಗಿ ಇರಲಿ

ನೀವು ಉಡುವ ಸೀರೆಯು ಲೈಟ್ ಆಗಿರಲಿ. ನೋಡುಗರಿಗೂ ಇಷ್ಟ ಆಗುತ್ತದೆ.ಮತ್ತು ನಿಮಗೂ ಹೆಚ್ಚು ಹೊಂದಿಕೊಳ್ಳುತ್ತದೆ.

ಸೀರೆಗೆ ತಕ್ಕಂತೆ ಮೇಕಪ್ ಮತ್ತು ಹೇರ್ ಸ್ಟೈಲ್

ಇದು ಬಹಳ ಮುಖ್ಯವಾದದ್ದು. ಅತಿಯಾದ ಮೇಕಪ್ ಮಾಡದೇ ನರ್ಮಲ್ ಆಗಿ ಇರಿ. ಜತೆಗೆ ಹೇರ್ ಸ್ಟೈಲ್ ಕೂಡ ಸಿಂಪಲ್ ಆಗಿರಲಿ. ತುಟಿಗೆ ಹಚ್ಚುವ ಬಣ್ಣ ಸೀರೆಗೆ ಮ್ಯಾಚ್ ಆಗುವಂತೆ ಇರಲಿ.


Share It

You cannot copy content of this page