ಅಪರಾಧ ಸಿನಿಮಾ ಸುದ್ದಿ

ಚಾರ್ಜ್ ಶೀಟ್ ಸಲ್ಲಿಕೆಯಾಗುತ್ತಿದ್ದಂತೆ ಪತ್ನಿಗೆ ಜೈಲಿನಿಂದ ದರ್ಶನ್ ಕರೆ

Share It

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಇಂದು SPP ಮೂಲಕ ಬರೋಬ್ಬರಿ 3,991 ಪುಟಗಳ ಸುದೀರ್ಘ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಈ ಚಾರ್ಜ್ ಶೀಟ್ ಸಲ್ಲಿಕೆ ನಂತರ ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಸೆಲ್ ನಂಬರ್ 15 ರಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ್ ಅವರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ತಕ್ಷಣವೇ ಸೆಲ್ ನಿಂದ ಹೊರಹೋಗಿ ಜೈಲಿನ ಫೋನ್ ಮೂಲಕ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕರೆ ಮಾಡಿದ್ದಾರೆ.

ಆಗ ಕರೆ ಸ್ವೀಕರಿಸಿ ಮಾತನಾಡಿದ ಪತ್ನಿ ವಿಜಯಲಕ್ಷ್ಮಿ ಅವರು ಮಾತನಾಡಿದ್ದಾರೆ‌. ಆಗ ದರ್ಶನ್ ಹೇಗಿದ್ದರೂ ಈಗ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ನಾನು ಬೇಲ್ ಪಡೆಯಲು ಅರ್ಜಿ ಸಲ್ಲಿಸಿದರೆ ಬೇಲ್ ಸಿಗುತ್ತಾ? ಎಂದು ಪತ್ನಿ ವಿಜಯಲಕ್ಷ್ಮಿ ಅವರನ್ನು ಕೇಳಿದ್ದಾರೆ. ಅದಕ್ಕೆ ವಿಜಯಲಕ್ಷ್ಮಿ ಅವರು ಈಗ ಏನೂ ಗೊತ್ತಾಗ್ತಿಲ್ಲ, ನೀವು ಎ-1 ಆಗಿಲ್ಲ ಮೊದಲಿದ್ದಂತೆ ಎ-2 ನೋಡೋಣ ಬೇಲ್ ಅಪ್ಲಿಕೇಶನ್ ಸಲ್ಲಿಸೋಣ ಎಂದಷ್ಟೇ ಉತ್ತರಿಸಿದ್ದಾರೆ.

ಆಗ ದರ್ಶನ್ ತುಸು ಆತಂಕದಿಂದ ಏನು ನನಗೆ ಇನ್ನೂ ಬೇಲ್ ಸಿಗೋದು ಡೌಟಾ? ಎಂದು ಕೇಳಿದ್ದಾರೆ. ಆಗ ವಿಜಯಲಕ್ಷ್ಮಿ ಅವರು ನೋಡೋಣ ಇನ್ನೂ ಅವಕಾಶ ಇದೆ ಎಂದಷ್ಟೇ ಹೇಳಿದ್ದಾರೆ. ಹೀಗೆ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ದರ್ಶನ್ ಅವರು 5 ನಿಮಿಷಗಳ ಕಾಲ ಬೇಲ್ ಬಗ್ಗೆ ವಿಚಾರಿಸಿದ್ದಾರೆ.


ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಖೈದಿ ದರ್ಶನ್ ಅವರು ನಡೆಸಿದ ಫೋನ್ ಸಂಭಾಷಣೆಯನ್ನು ಜೈಲಿನ ನಿಯಮದಂತೆ ರೆಕಾರ್ಡ್ ಮಾಡಲಾಯಿತು.


Share It

You cannot copy content of this page