ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮನದ ಮಾತು ಎಂಬ ಬಾನುಲಿ ಕಾರ್ಯಕ್ರಮಕ್ಕೆ ಸದ್ಯ ಸಾಮಜಿಕ ಜಾಲತಾಣದಲ್ಲಿ ತೀಕ್ಷ್ಣವಾದ ಪ್ರತಿಕ್ರಿಯೆ ದೊರೆತಿದೆ. ಈ ಕಾರ್ಯಕ್ರಮದ ವಿಡಿಯೋವನ್ನು ಬಿಜೆಪಿ ಯು ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಅಲ್ಲಿ ಹಾಕಿತ್ತು. ಈ ವಿಡಿಯೋ ವನ್ನು ಸುಮಾರು 10 ಲಕ್ಷ ಜನ ಡಿಸ್ ಲೈಕ್ ಮಾಡಿದ್ದಾರೆ. 2.3 ಲಕ್ಷದಷ್ಟು ಜನರು ‘ಲೈಕ್’ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.
ಅಗಸ್ಟ್ 30ರಂದು ಹಾಕಲಾದ ಮನದ ಮಾತು ಕಾರ್ಯಕ್ರಮದ ವಿಡಿಯೊವನ್ನು 46.6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸದ್ಯ ಈ ವಿಡಿಯೋ ಭಾರತದ ಯುಟ್ಯೂಬ್ ಟ್ರೆಂಡಿಂಗ್‌ನಲ್ಲಿ 37ನೇ ಸ್ಥಾನದಲ್ಲಿದೆ. 1.82 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋಗೆ ಬಂದಿರು ಡಿಸ್ ಲೈಕ್ ಗಳ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿವೆ.
ಡಿಸ್‌ಲೈಕ್‌ಗಳು ಡಿಲೀಟ್
ವಿಡಿಯೋಗೆ ಬಂದಿರುವ ಡಿಸ್‌ಲೈಕ್‌ಗಳನ್ನು ಡಿಲೀಟ್ ಮಾಡುತ್ತಿರುವುದು ಪತ್ತೆಯಾಯಿತು. ಮಂಗಳವಾರ ಸಂಜೆ 6.30 ರಲ್ಲಿ ಪರಿಶೀಲಿಸಿದಾಗ ಈ ವಿಡಿಯೋಗೆ ವ್ಯಕ್ತವಾಗಿದ್ದ ಡಿಸ್‌ಲೈಕ್‌ಗಳ ಸಂಖ್ಯೆ 9.92 ಲಕ್ಷದಷ್ಟು ಇತ್ತು. 7 ಗಂಟೆಯಲ್ಲಿ 9.98 ಲಕ್ಷದಷ್ಟು ಇತ್ತು.8.40ರಲ್ಲಿ ಪರಿಶೀಲಿಸಿದಾಗ ಡಿಸ್‌ಲೈಕ್‌ಗಳ ಸಂಖ್ಯೆ 9.3 ಲಕ್ಷಕ್ಕೆ ಕುಸಿದಿದೆ.
‘ಮೋದಿ ಅವರು ಜನರ ನಿಜವಾದ ಪ್ರತಿಕ್ರಿಯೆಯ ನ್ನು ಎದುರಿಸಲು ಹೆದರುತ್ತಿದ್ದಾರೆ’ ಎಂದು ಹಲವರು ಹೇಳುತ್ತಿದ್ದಾರೆ. ಅದಲ್ಲದೆ ಮೋದಿಯ ಪರ ಯುಟ್ಯೂಬ್ ಕೆಲಸ ಮಾಡುತ್ತಿದೆ ಎಂದು ಆರೋಪಿಸದಿದ್ದಾರೆ.

