2024 ರ ಆವೃತ್ತಿಯ ಐಪಿಎಲ್ ನಲ್ಲಿ ಆರ್ ಸಿಬಿ ಕೊನೆ ಕೊನೆಗೆ ಉತ್ತಮ ಪ್ರದರ್ಶನ ನೀಡಿ ಪ್ಲೆ ಆಫ್ ಗೂ ಕೂಡ ಆಯ್ಕೆಯಾಗಿತ್ತು. ಮೊದಲ 8 ಪಂದ್ಯಗಳನ್ನು ಆಡಿದ್ದ ಆರ್ ಸಿಬಿ ಕೇವಲ ಒಂದೇ ಒಂದು ಪಂದ್ಯವನ್ನು ಗೆದ್ದು ಪಾಯಿಂಟ್ ಟೇಬಲ್ಸ್ ನ ಕೊನೆಯಲ್ಲಿ ಉಳಿದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಇನ್ನು ಎರಡನೇ ಆವೃತ್ತಿಯ ಕೊನೆಯ ಪಂದ್ಯಗಳಲ್ಲಿ ಆರ್ ಸಿಬಿ ಆಡಿದ 6 ಪಂದ್ಯಗಳಲ್ಲಿ 6 ಪಂದ್ಯಗಳನ್ನೂ ಗೆದ್ದು ದಾಖಲೆ ನಿರ್ಮಿಸುವುದರ ಮೂಲಕ ಪ್ಲೆ ಆಫ್ ಗೆ ಎಂಟ್ರಿ ಕೊಟ್ಟಿತ್ತು. ನಂತರ ಪ್ಲೆ ಆಪ್ ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು 2024 ಐಪಿಎಲ್ ನಿಂದ ಹೊರಗುಳಿದಿತ್ತು.
ಬಿಸಿಸಿಐ ನಿಯಮದ ಪ್ರಕಾರ, 2025ರ ಮೆಗಾ ಹರಾಜಿಗೂ ಮುನ್ನ ಆರ್ ಸಿಬಿ ತನ್ನಲ್ಲಿ ಯಾವೆಲ್ಲ ಆಟಗಾರನ್ನು ಉಳಿಸಿಕೊಳ್ಳಬಹುದು ಎಂದು ನೋಡುವುದಾದರೆ, ಈಗ ದೊರೆತಿರುವ ಮಾಹಿತಿಗಳ ಪ್ರಕಾರ ಮೊದಲು ಉಳಿಸಿಕೊಳ್ಳುವ ಆಟಗಾರ ವಿರಾಟ್ ಕೊಹ್ಲಿ. ಇವರು ಕಳೆದ ಐಪಿಎಲ್ ನಲ್ಲಿ ಆಡಿದ 15 ಪಂದ್ಯಗಳಲ್ಲಿ ಬರೋಬ್ಬರಿ 741 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು.
ಇನ್ನು ಎರಡನೆಯದಾಗಿ ಇಂಗ್ಲೆಡ್ ನ ಆಲ್ ರೌಂಡರ್ ವಿಲ್ ಜಾಕ್ಸ್. ಬಳಿಕ ಕೇಮರೂನ್ ಗ್ರೀನ್, ವೇಗಿ ಮಹಮದ್ ಸಿರಾಜ್, ರಜತ್ ಪಟಿದಾರ್, ಅನುಜ್ ರಾವತ್ ಅಥವಾ ವೈಶಾಕ್ ವಿಜಯ್ ಕುಮಾರ್ ಇಷ್ಟು ಆಟಗಾರರನ್ನು ಆರ್ ಸಿಬಿ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹಲವು ವರದಿಗಳು ಹೇಳುತ್ತಿವೆ .
ಗ್ಲೇನ್ ಮ್ಯಾಕ್ಸ್ ವೆಲ್ ವಿಚಾರವಾಗಿ ನೋಡುವುದಾದರೆ ಮ್ಯಾಕ್ಸ್ ವೆಲ್ ಕಳೆದ ಐಪಿಎಲ್ ನಲ್ಲಿ ಅಷ್ಟೇನು ಪ್ರದರ್ಶನ ನೀಡಿಲ್ಲ. ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ರಾಯಲ್ ಚಾಲೆಂಜರ್ಸ್ ಖಾತೆಯನ್ನು ಅನ್ ಫಾಲೋ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನೋಡಿದ ಮೇಲೆ ಆರ್ ಸಿಬಿ ಮ್ಯಾಕ್ಸ್ ವೆಲ್ ರವರನ್ನು ರೀಟೈನ್ ಮಾಡಿಕೊಳ್ಳುವುದು ಬಹುತೇಕ ಅನುಮಾನವಾಗಿ ಕಾಣುತ್ತಿದೆ.