ಉಪಯುಕ್ತ ಸುದ್ದಿ

ಹಿಮಾಲಯದಲ್ಲಿ ಹಿಮ ಕಣೆಯಾಗ್ತಿದ್ಯಾ? ಶಿವನ ಪರ್ವತವೇ ಖಾಲಿ ಖಾಲಿ!

Share It

ಹಿಮಾಲಯವು ಭಾರತದ ಪಾಲಿಕೆ ಅತ್ಯಂತ ಪ್ರಮುಖವಾದ ಪರ್ವತ ಸಾಲುಗಳಾಗಿವೆ. ಹಿಂದೂ ಧರ್ಮದ ಮಂದಿಗೆ ಹಿಮಾಲಯವು ಶಿವನ ಆಲಯ ಎಂಬ ಪರಿಕಲ್ಪನೆ ಇದೆ. ವಿಜ್ಞಾನಿಗಳಿಗೆ ಹಿಮಲಯವು ಮೂರನೇ ಧ್ರುವ ವಾಗಿದೆ. ಸದಾ ಹಿಮದಿಂದ ತುಂಬಿದ್ದ ಹಿಮಾಲಯ ಈಗ ಬರಿದಾಗುತ್ತಿದೆ. ಅದರಲ್ಲೂ ಓಂ ಪರ್ವತ ಸಂಪೂರ್ಣವಾಗಿ ಬರಿದಾಗಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗುತ್ತಿದೆ.

ಓಂ ಪರ್ವತವು ಶಿವನ ಆವಾಸದ ಮೂಲ ಪರ್ವತ ಎಂದು ನಂಬಲಾಗುತ್ತದೆ. ಇದೇ ಮೊದಲ ಬಾರಿಗೆ ಓಂ ಪರ್ವತದ ಮೇಲೇರುವ ಸಂಪೂರ್ಣ ಹಿಮ ಕರಗಿದೆ. ಕೈಲಾಸ ಪರ್ವತದಂತೆ ಈ ಪರ್ವತವು ಸಹ ಹೆಚ್ಚು ಆಕರ್ಷಣೀಯ ತಾಣವಾಗಿದೆ. ದೇಶ ವಿದೇಶಗಳಿಂದ ಈ ಪರ್ವತವನ್ನು ನೋಡಲು ಪ್ರವಾಸಿಗರ ದಂಡೆ ಬರುತ್ತದೆ.

ಓಂ ಪರ್ವತವು 5,559 ಮೀಟರ್ ಗಳಷ್ಟು ಎತ್ತರ ವಿದ್ದು , ಈ ಪರ್ವತದ ಮೇಲೆ ಹಿಮವು ಬಿದ್ದು ಓಂ ಎಂಬ ಆಕೃತಿಯು ಮಾಡುವುದರಿಂದ ಈ ಪರ್ವತಕ್ಕೆ ಓಂ ಪರ್ವತ ಎಂದು ಕರೆಯುತ್ತಾರೆ. ಈ ಓಂ ಎಂಬುದು ನಮ್ಮ ಬ್ರಹ್ಮಾಂಡ ಉದಯವಾದಾಗ ಕೇಳಿ ಬಂದ ಶಬ್ದ ಎಂದು ವಿಜ್ಞಾನಿಗಳು ನಂಬುತ್ತಾರೆ. ಇಂದಿಗೆ ಓಂ ಎಂಬ ಶಬ್ದ ಬ್ರಹ್ಮಾಂಡದಲ್ಲಿ ಕೇಳಿ ಬರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಹವಾಮಾನದ ಬದಲಾವಣೆ ಮತ್ತು ಅತಿಯಾದ ಮಳೆಯಿಂದಾಗಿ ಪರ್ವತ ಹಿಮ ಕರಗಿದೆ. ಜಾಗತಿಕ ತಾಪಮಾನದ ಹೊಡೆತ ಹಿಮಾಲಯಕ್ಕೆ ಸ್ವಲ್ಪ ಸ್ವಲ್ಪವೇ ತಟ್ಟುತ್ತಿರುವ ಹಾಗೆ ಕಾಣುತ್ತಿದೆ. ಇತ್ತೀಚೆಗೆ ಉಷ್ಣಾಂಶ ಹೆಚ್ಚುತ್ತ ಹೋಗುತ್ತಿದ್ದೆ. ಪ್ರತಿ ದಶಕಕ್ಕೆ 0.8 ಡಿಗ್ರಿಯಷ್ಟು ಉಷ್ಣಾಂಶ ಹೆಚ್ಚುತ್ತಿದೆ. ಇದು ಜಾಗತಿಕವಾಗಿ ಇರುವುದಕ್ಕಿಂತ ಹೆಚ್ಚಾಗಿದ್ದು ಇದು ಹೀಗೆ ಮುಂದುವರೆದರೆ 2100 ರ ವೇಳೆಗೆ ಹಿಮಾಲಯದ ಶೇ.75 ರಷ್ಟು ಹಿಮ ಕರಗುತ್ತದೆ.

ಹಿಮಾಲಯದ ಹಿಂಬದಿಯಲ್ಲಿ ಚೀನಾವು ಬೃಹತ್ ಪ್ರಮಾಣದ ನೀರನ್ನು ಸಂಗ್ರಹ ಮಾಡುವ ಡ್ಯಾಂ ಗಳನ್ನು ನಿರ್ಮಾಣ ಮಾಡುತ್ತಿದೆ. ಜೊತೆಗೆ ರೈಲು ಹಳಿಯನ್ನು ಹಿಮಾಲಯದಲ್ಲಿ ಅಳವಡಿಸಲು ಯೋಜನೆಯನ್ನು ರೂಪಿಸಿದೆ. ಇದರಿಂದಾಗಿ ಹಿಮಾಲಯದ ಭೂ ಪದರಗಳಲ್ಲಿ ಒತ್ತಡ ಸಂಭವಿಸಿ ಒಮ್ಮೆಲೇ ಅವು ಹೊಡೆಯುವ ಕೆಲಸ ಆಗುತ್ತದೆ.

ಸಂಶೋಧಕರು ಹೇಳುತ್ತಿರುವಂತೆ ಹಿಮಾಲಯದಲ್ಲಿ ವರ್ಷದಿಂದ ವರ್ಷಕ್ಕೆ ಹಿಮ ಬೀಳುವ ಪ್ರಮಾಣ ಕಡಿಮೆಯಾಗುತ್ತಿದೆ. ಜೊತೆಗೆ ಮೇಘ ಸ್ಫೋಟಗಳು ಸಂಭವಿಸುತ್ತಿದ್ದು ಹಿಮವನ್ನು ಕರಗುವಂತೆ ಮಾಡುತ್ತಿವೆ ಎಂದು ಹೇಳುತ್ತಿದ್ದಾರೆ. ಇದು ಭಾರತೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ನಷ್ಟವನ್ನು ಮಾಡಲಿದೆ. ಒಂದು ವೇಳೆ ಹಿಮ ಹೀಗೆ ನಿರಂತವಾಗಿ ಕರಗಿದರೆ ಜಗತ್ತಿನ 100 ಕೋಟಿ ಮಂದಿಗೆ ನೀರಿನ ಅಭಾವ ಸೃಷ್ಟಿಯಾಗುತ್ತದೆ. ಹಿಮಾಲಯದಲ್ಲಿ ಗಂಗಾ, ಯಮುನಾ, ಬ್ರಹ್ಮಪುತ್ರ, ಕೋಸಿ,ಇತರ ಪ್ರಮುಖ ನದಿಗಳು ಹುಟ್ಟುತ್ತವೆ. ಇವುಗಳು ಮಳೆಗಾಲದಲ್ಲಿ ಮಳೆಯಿಂದ ತುಂಬಿ ಹರಿದರೆ, ಬೇಸಿಗೆಯಲ್ಲಿ ಹಿಮ ಕರಗಿ ಹರಿಯುತ್ತಿವೆ. ಹಿಮವೇ ಕಾಲಿಯಾದ್ರೆ ಈ ನದಿಗಳು ಕೇವಲ ಮಳೆಗಾಲಕ್ಕೆ ಸೀಮಿತವಾಗುತ್ತವೆ.

ಇನ್ನೂ ಗಂಗಾ ನದಿಯ ಪಾತ್ರದಲ್ಲಿ 45 ಕೋಟಿ ಯಷ್ಟು ಜನ ವಾಸ ಮಾಡುತ್ತಾರೆ. ಗಂಗಾ ಯಮುನಾ ಕೊಶಿ ನದಿಯ ಸಾಲಿನಲ್ಲಿರುವ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಖಂಡ, ಹರಿಯಾಣ,ಹಿಮಾಚಲ ಪ್ರದೇಶದ ಜನರಿಗೆ ಇದು ಸಮಸ್ಯೆಯಾಗಿ ಪರಿಣಮಿಸುತ್ತದೆ.


Share It

You cannot copy content of this page