ಹೊಳಲ್ಕೆರೆಯ ತಾಲ್ಲೂಕು ಪಂಚಾಯಿತಿ ಎದುರಿನ ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚಿ 4 ಸಿಬ್ಬಂದಿ ಮುಷ್ಕರ ಹೂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಕ್ಯಾಂಟೀನ್ ಸಿಬ್ಬಂದಿ ಸಿದ್ದೇಶ್ ಹೀಗೆ ಹೇಳಿದರು: “ನಾವು 4 ಜನ ಸಿಬ್ಬಂದಿ 1.5 ವರ್ಷದಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದೇವೆ.
ಆದರೆ, ಕಳೆದ 4 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಆದರೆ, ನಮಗೆ ಸಂಬಳ ಕೊಡದೆ ಹಾಗೆಯೇ ಇಂದಿರಾ ಕ್ಯಾಂಟೀನ್ ಬಾಗಿಲು ಹಾಕುತ್ತಿದ್ದಾರೆ. ಇದರಿಂದ ಈ ಇಂದಿರಾ ಕ್ಯಾಂಟೀನ್ ಗೆ ಯಾರೂ ಕೂಡ ಬರಲಾಗುತ್ತಿಲ್ಲ.
ಇದರಿಂದ ರೋಸಿಹೋಗಿ ನಾವು 4 ಜನ ಸಿಬ್ಬಂದಿ ಇಂದು ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚಿದ್ದೇವೆ. ಮೊದಲು ನಮ್ಮ ಬಾಕಿ ಇರುವ 4 ತಿಂಗಳ ಸಂಬಳ ಕೊಡಬೇಕು ಎಂದು ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಂಡರು.