ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಇಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು ಸುಮಾರು 1.30 ಲಕ್ಷ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಪ್ರತಿಭಟನೆಯ ಹಿನ್ನಲೆಯಲ್ಲಿ ರಾಜ್ಯದ 48 ಸಾವಿರ ಶಾಲೆಗಳಿಗೆ ಇಂದು ರಜೆ ಬೀಳಲಿದ್ದು ಸಾಮೂಹಿಕ ರಜೆಯನ್ನು ಶಿಕ್ಷಕರು ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಅನೇಕ ಬಾರಿ ಹೋರಾಟ ನಡೆಸಿ ಸಚಿವರ ಮೊರೆ ಹೋಗಿದ್ದರು ಬೇಡಿಕೆ ಈಡೇರಿಲ್ಲ.
ಇನ್ನೂ ಪ್ರತಿಭಟನೆಗೆ ವಿವಿಧ ಭಾಗಗಳಿಂದ ಶಿಕ್ಷಕರು ಬರಲಿದ್ದಾರೆ. ಇಲಾಖೆಯ ಆಜ್ಞೆಯನ್ನು ಮೀರಿಯೂ ಹೋರಾಟ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ನಾಗೇಶ್ ಮಾಹಿತಿ ನೀಡಿದ್ದಾರೆ.
2017ರ ವೃಂದ ಮತ್ತು ನೇಮಕಾತಿ ನಿಯಮಗಳು 2016ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. 1 ರಿಂದ 8 ನೆಯ ತರಗತಿಯ ವರೆಗೆ ನೇಮಕ ಗೊಂಡಿದ್ದ ಶಿಕ್ಷಕರಿಗೆ 1 ರಿಂದ 5 ಕ್ಕೆ ಹಿಂಬಡ್ತಿ ನೀಡಿರುವುದು.
1 .20 ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಪದವಿ ಪಡೆದ ಶಿಕ್ಷಕರನ್ನು ಜೆಪಿಡಿ ಎಂದು ಮಾಡಬೇಕು. ಸೇವಾ ಹಿರಿತನದ ಮೇಲೆ ಬಡ್ತಿ ನೀಡಬೇಕು ಎಂಬ ಬೇಡಿಕೆ ನಮ್ಮದು ಎಂದು ಸಂಘದ ಅಧ್ಯಕ್ಷ ತಿಳಿಸಿದ್ದಾರೆ.
