ಉಪಯುಕ್ತ ಸುದ್ದಿ

ಡೇಂಜರ್ ಜೋನ್ ನಲ್ಲಿರುವ ಕರ್ನಾಟಕದ 7 ಜಲಾಶಯಗಳು

Share It

ಜಲಾಶಯಗಳು ಆಧುನಿಕ ಭಾರತದ ದೇವಾಲಯಗಳು ಎಂದು ಭಾರತ ಪ್ರಧಾನಿ ನೆಹರುರವರು ಹೇಳುತ್ತಿದ್ದರು. ಆದರಂತೆ ದೇಶದ ನಾನಾ ಭಾಗಗಳಲ್ಲಿ ಜಲಾಶಯಗಳನ್ನು ನಿರ್ಮಾಣ ಮಾಡುವ ಮೂಲಕ ಹಸಿರು ಕ್ರಾಂತಿಯನ್ನು ಉತ್ತೇಜನ ಮಾಡಿದರು. ಇದರಿಂದ ಕೃಷಿ ಕ್ಷೇತ್ರವು ಆಮೂಲಾಗ್ರ ಬದಲಾವಣೆಯನ್ನು ಸಾಧಿಸಲು ಸಹಕಾರಿಯಾಗಿದೆ.

ಇಂತಹ ಅನೇಕ ದೇವಾಲಯಗಳು ಈಗ ಬಿರುಕು ಬಿಟ್ಟಿವೆ. ಕೆಲವು ಜಲಾಶಯಗಳಿಗೆ 100 ವರ್ಷಗಳು ತುಂಬಿದೆ. ಇನ್ನೂ ಕೆಲವು ಜಲಾಶಯಗಳಲ್ಲಿ ಸಣ್ಣ ಪುಟ್ಟ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿವೆ. ಪ್ರತಿ ಜಲಾಶಯದ ನಿರ್ವಹಣೆಗೆಂದು ಒಂದು ಮಂಡಳಿಯೇ ಇರುತ್ತದೆ. ಪ್ರಮುಖ ಇಂಜಿನಿಯರ್, ಸಹಾಯಕ ಇಂಜಿನಿಯರ್ ಹೀಗೆ ಹತ್ತು ಹಲವು ಜನರು ಈ ಮಂಡಳಿಯಲ್ಲಿ ಇರುತ್ತಾರೆ. ಇವರ ಬೇಜವಾಬ್ದಾರಿ ತನದಿಂದ ಅಣೆಕಟ್ಟುಗಳು ಇದ್ದಕ್ಕಿಂದ್ದಂತೆ ಸಮಸ್ಯೆಗೆ ತುತ್ತಾಗುತ್ತಿವೆ. ಮೊನ್ನೆ ತುಂಗಾ ಭದ್ರ ಜಲಾಶಯದಲ್ಲಿ ಇದೆ ರೀತಿಯ ಸಮಸ್ಯೆ ಉಂಟಾಗಿದೆ. ಕರ್ನಾಟಕದಲ್ಲಿ ಇನ್ನು 6 ಜಲಾಶಯಗಳು ಇದೆ ರೀತಿಯ ಸಮಸ್ಯೆಯನ್ನು ಎದುರು ನೋಡುತ್ತಿವೆ. ಅವುಗಳನ್ನು ಈ ಕೆಳಗಿನಂತೆ ನೋಡೋಣ.

ಕಬಿನಿ ಜಲಾಶಯ (50 ವರ್ಷ)

ಕಬಿನಿ ಜಲಾಶಯಕ್ಕೆ ಅನುದಾನದ ಕೊರತೆ ಕಾಡುತ್ತಿದೆ. ಜಲಾಶಯದಿಂದ ಈಗಾಗಲೇ ನೀರು ಸೋರಿಕೆ ಆಗುತ್ತಿದೆ. ನೀರು ಸೋರಿಕೆಯನ್ನು ತಡೆಗಟ್ಟಲು 2020 -21 ರಲ್ಲಿ 92 ಕೋಟಿ ವೆಚ್ಚದ ಮನವಿಯನ್ನು ಸರ್ಕಾರಕ್ಕೆ ನೀಡಲಾಗಿತ್ತು . ಸದ್ಯ ಇವರೆಗೆ ಆ ಹಣ ಬಿಡುಗಡೆ ಆಗಿಲ್ಲ. ದಂಡೆಯ ಸ್ಲೊಹಿಸ್ ವಾಲ್ ಶಿಥಿಲವಾಗಿದೆ ಎಂಬ ಆರೋಪವಿದೆ.

ನಾರಾಯಣ ಪುರ ಜಲಾಶಯ (42 ವರ್ಷ)

ಈ ಜಲಾಶಯದಲ್ಲಿ ಕಳೆದ 2005 ರಲ್ಲಿ ಒಂದು ಕ್ರಸ್ಟ್ ಗೇಟ್ ಕಿತ್ತು ಹೋಗಿತ್ತು. ಆಗ ಸರ್ಕಾರ ಅದನ್ನು ಸರಿ ಪಡಿಸಿತು.ಸದ್ಯ 30 ಗೇಟ್ ಗಳ ಮೇಲ್ವಿಚಾರಣೆಯ ಕಾರ್ಯ ಒಂದೂವರೆ ವರ್ಷದಿಂದ ನಡೆದಿಲ್ಲ ಎಂದು ಸ್ಥಳೀಯರು ಆರೋಪ ಮಾಡುತ್ತಾರೆ.

ಕೆಆರ್ ಎಸ್ ಜಲಾಶಯ (93 ವರ್ಷ)

ಈ ಜಲಾಶಯದ ಸುತ್ತಲೂ ಗಣಿಗಾರಿಕೆ ನಡೆಯುತ್ತಿದೆ. ಜಲಾಶಯ ಬಿರುಕು ಬಿಟ್ಟಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಸ್ವಯಂ ಚಾಲಿತ ಗೇಟ್ ಗಳ ಅಳವಡಿಕೆ ನಡೆಯುತ್ತಿದೆ. ಆದರೆ ಪ್ರವಾಹದ ಸಂದರ್ಭದಲ್ಲಿ ಪ್ರವಾಹ ತಡೆಯುವ ಸ್ಟಾಪ್ ಲಾಕ್ ಗೇಟ್ ಗಳು ಇಲ್ಲ.

ವಾಣಿ ವಿಲಾಸ ಸಾಗರ (117 ವರ್ಷ)

117 ವರ್ಷಗಳ ಪಯಣವನ್ನು ಪೂರ್ಣ ಮಾಡಿರುವ ಈ ಜಲಾಶಯವು ಸುಣ್ಣ ಮತ್ತು ಗಾರೆಯಿಂದ ನಿರ್ಮಾಣವಾಗಿದೆ. ಈ ಡ್ಯಾಂಮ್ ನಲ್ಲಿ ಗೇಟ್ ವ್ಯವಸ್ಥೆ ಇಲ್ಲ. ತೂಬಿನ ವ್ಯವಸ್ಥೆ ಇದ್ದು. ಇದು ಹೆಚ್ಚು ಅಪಾಯಕಾರಿಯಾಗಿದೆ. ಗೇಟ್ ಅಳವಡಿಕೆ ನಡೆಯಬೇಕಿದೆ.

ಸೊನ್ನ ಬ್ಯಾರೇಜ್ (14 ವರ್ಷ)

ಈ ಜಲಾಶಯದಲ್ಲಿ ಹೈಡ್ರಾಲಿಕ್ ಗೇಟ್ ಗಲಿಲ್ಲ. ಮಾನವ ಸಹಾಯದಿಂದಲೇ ಗೇಟ್ ಗಳು ಕಾರ್ಯ ನಿರ್ವಹಿಸಬೇಕು. ಇದರಿಂದಾಗಿ ನೀರು ಹೆಚ್ಚು ಪೋಲಾಗುತ್ತಿದೆ. ಮರಳು ದೋಷಲು ಇಡಿ ಗೇಟ್ ಅನ್ನೇ ಎತ್ತಿದ ಘಟನೆ ಇದೆ.

ಸಿಗಟಾಲೂರು ಬ್ಯಾರೇಜ್ (12 ವರ್ಷ)

ಈ ಜಲಾಶಯವು ಏತ ನೀರಾವರಿ ವ್ಯವಸ್ಥೆಯನ್ನು ಹೊಂದಿದೆ. ಸದ್ಯ ಈ ಜಲಾಶಯದಲ್ಲಿ ನೀರು ಸೋರಿಕೆ ಸಮಸ್ಯೆ ಶುರುವಾಗಿದೆ. ಒಟ್ಟು 26 ಕ್ರಸ್ಟ್ ಗೇಟ್ ಗಳಿದ್ದು ಅದರಲ್ಲಿ 13 ಗೇಟ್ ಗಳಲ್ಲಿ ನೀರು ಸೋರಿಕೆಯಾಗುತ್ತಿದೆ.


Share It

You cannot copy content of this page