ರಾಮನಗರ; ಎಚ್.ಡಿ.ಕುಮಾರಸ್ವಾಮಿ ಮಂಡ್ಯದಿಂದ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ಶಾಸಕರ ಸ್ಥಾನ ತೆರವಾಗಿದೆ. ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಭರ್ಜರಿ ರಾಜಕೀಯ ಶುರುವಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಉಪಚುನಾವಣೆ ಎದುರಿದ್ದವು. ಎರಡು ಪಕ್ಷಕ್ಕೂ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಟಿಕೆಟ್ ವಿಚಾರದಲ್ಲಿ ಕಗ್ಗಂಟಾಗಬಹುದು.ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ ಪಕ್ಷದಿಂದ ಸ್ವರ್ಧಿಸುವುದು ಎನ್ನುವುದು ಗೊಂದಲವಾಗಿದೆ.
ಡಿಸಿಎಂ ಶಿವಕುಮಾರ್ ಪದೇಪದೇ ಚನ್ನಪಟ್ಟಣಕ್ಕೆ ಬೇಟಿ ನೀಡುತ್ತಿರುವುದು ಉಪಚುನಾವಣೆ ರಂಗೇರಿಸಬಹುದು. ಹಿಂದೆಯಿಂದಲೂ ಚನ್ನಪಟ್ಟಣದಲ್ಲಿ ಜೆಡಿಎಸ್ ಪ್ರಭಾವ ಇರುವುದರಿಂದ ಕುಮಾರಸ್ವಾಮಿ ಮೇಲೆ ಟಿಕೆಟ್ ಯಾರಿಗೆಂಬುದು ನಿರ್ಧರವಾಗಬಹುದು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಯಾರು ಅಭ್ಯರ್ಥಿ ಎನ್ನುವ ಗೊಂದಲದ ಜೊತೆಗೆ ಸಿ ಪಿ ಯೋಗೇಶ್ವರ್ ಹಿಂದೇಟು ಇದಕ್ಕೆ ಬಿಜೆಪಿ ಹೈಕಮಾಂಡ್ ಮೇಲೆ ನಿರ್ಧಾರ ನಿರ್ಧರಿಸಿದೆ. ಇವರಿಗೆ ಟಕ್ಕರ್ ಕೊಡಲು ಡಿಸಿಎಂ ಶಿವಕುಮಾರ್ ಪದೇ ಪದೇ ಬೇಟಿ ನೀಡುವ ಮೂಲಕ ಸಿದ್ಧವಾಗುತ್ತಿದ್ದಾರೆ.

