ನವದೆಹಲಿ : ನೀಟ್ ಪಿಜಿ ಪರೀಕ್ಷೆಗೆ ಕೇವಲ ಎರಡು ನಿಮಿಷ ತಡವಾಗಿದ್ದರಿಂದ ಗೇಟ್ ಮುಚ್ಚಿ ಯುವತಿಯನ್ನು ಒಳಗೆ ಬಿಡಲು ನಿರಾಕರಿಸಿರುವ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪರೀಕ್ಷಾ ಸಮಯವನ್ನು 8.30 ಕಕ್ಕೆ ನಿಗದಿಯಾಗಿತ್ತು. ಆದರೆ, ಯುವತಿ 8.32 ಕ್ಕೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಆಗ ಒಳಗೆ ಬಿಡಲು ಗೇಟ್ ಸಿಬ್ಬಂದಿ ನಿರಾಕರಿಸಿದ್ದು, ಯುವತಿ ಅಲ್ಲಿಯೇ ಅಳುತ್ತಾ ಕುಳಿತಿದ್ದಾಳೆ.
ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಆ ಹುಡುಗಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕಿತ್ತು ಎಂದು ಇನ್ನೂ ಕೆಲವರು ನೀತಿ ನಿಯಮಗಳಿಗೆ ಬದ್ಧವಾಗಿರುವುದು ಸರಿ ಎಂದು ಹೇಳುತ್ತಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋದ ಸ್ಥಳ ಮತ್ತು ದಿನಾಂಕ ತಿಳಿದು ಬಂದಿಲ್ಲ. ಈ ಬಗ್ಗೆ ಚರ್ಚೆ ಮಾತ್ರ ಜೋರಾಗಿದೆ.