2025 ರ ಮೆಗಾ ಆಕ್ಷನ್ ಗೆ ಎಲ್ಲಾ ಸಿದ್ಧತೆಗಳು ನೆಡೆಯುತ್ತಿವೆ. ಇನ್ನೇನು ಇಂಡಿಯನ್ ಪ್ರೀಮಿಯಾರ್ ಲೀಗ್ (ಐಪಿಎಲ್ )ನ 10 ತಂಡಗಳೂ ಕೂಡ ಶ್ರೀಘ್ರದಲ್ಲೇ ತಮ್ಮ ರೀಟೈನ್ ಲಿಸ್ಟ್ ಅನ್ನು ಪ್ರಕಟಿಸಲಿವೆ. ಈ ಸಮಯದಲ್ಲಿ ತಮ್ಮ ಯು ಟ್ಯೂಬ್ ಚಾನೆಲ್ ನ ವೀಡಿಯೋವೂಂದರಲ್ಲಿ ಮಾತನಾಡಿರುವ ರವಿಚಂದ್ರನ್ ಅಶ್ವಿನ್,
ನಮ್ಮ ದೇಶದ ಆಟಗಾರರಿಗಿಂತ ವಿದೇಶಿ ಆಟಗಾರರೆ ಐಪಿಎಲ್ ಹರಾಜಿನಲ್ಲಿ ಹೆಚ್ಚು ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಇದು ಸಮಂಜಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ವಿದೇಶಿ ಆಟಗಾರರು ಮೆಗಾ ಹರಾಜಿಗೆ ಗೈರು ಆಗಿ ಮಿನಿ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇವರ ಹಣ ಗಳಿಸುವ ಉದ್ದೇಶ ಎದ್ದು ಕಾಣುತ್ತಿದೆ. ಈ ಬಗ್ಗೆ ಬಿಸಿಸಿಐ ಕೂಡಲೇ ಕ್ರಮ ಕೈಗೊಂಡು ಇದಕ್ಕೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ.
ಇವರೆಗೆ ಹರಾಜಿನಲ್ಲಿ ದಾಖಲೆ ಮಟ್ಟದ ಖರೀದಿಗೆ ಸೇಲ್ ಆಗಿರುವವರೆಲ್ಲ ವಿದೇಶಿ ಆಟಗಾರರೇ ಆಗಿದ್ದರೆ.ಇನ್ನು ಕಳೆದ ವರ್ಷ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಮಿಚಲ್ ಸ್ಟಾರ್ಕ್ ಅವರನ್ನು ಬರೋಬ್ಬರಿ 24.75 ಕೋಟಿ ಕೊಟ್ಟು ಖರೀದಿಸಿ ದಾಖಲೆ ಮಾಡಿತ್ತು. ಇನ್ನು ಸನ್ ರೈಸರ್ಸ್ ಹೈದ್ರಾಬಾದ್ ತಂಡವು ಪ್ಯಾಟ್ ಕಮ್ಮಿನ್ಸ್ ಅವರನ್ನು 20.50 ಕೋಟಿ ಕೊಟ್ಟು ಖರೀದಿಸಿತ್ತು.
ಈ ಎಲ್ಲಾ ಬೆಳವಣಿಗೆಯನ್ನು ನೋಡುತ್ತಾ ಹೋದರೆ ಪ್ರತಿ ವರ್ಷದಂತೆಯೇ ಈ ವರ್ಷವೂ ಕೂಡ ವಿದೇಶಿ ಆಟಗಾರರೇ ಮೇಲುಗೈ ಸಾದಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ನಂತರ ಮೆಗಾ ಹರಾಜಿನಲ್ಲಿ ರೈಟ್ ಟು ಮ್ಯಾಚ್ (ಆರ್ ಟಿಎಂ ) ಕಾರ್ಡ್ ಬಳಕೆಯನ್ನು ಕೂಡಲೇ ನಿಷೇದಿಸಬೇಕು ಈ ನಿಯಮದಿಂದ ಆಟಗಾರರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ತಮ್ಮ ಯು ಟ್ಯೂಬ್ ಚಾನೆಲ್ ನ ವಿಡಿಯೋವೂಂದರಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.