ಉಪಯುಕ್ತ ಸುದ್ದಿ

KSRTC ನೌಕರರಿಗೆ ಸಿಹಿಸುದ್ದಿ: ಅಂತರ್ ನಿಗಮ ವರ್ಗಾವಣೆಗೆ ಜ.31 ರವರೆಗೆ ಅವಕಾಶ

Share It

ಬೆಂಗಳೂರು: KSRTC ಸಿಬ್ಬಂದಿಗೆ ಸಿಹಿಸುದ್ದಿ ನೀಡಿರುವ ಸಾರಿಗೆ ಇಲಾಖೆ ಅಂತರದ ನಿಗಮ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಜನವರಿ 31ರವರೆಗೆ ಅರ್ಜಿ ಸಲ್ಲಿಸಬಹುದು.

2026 ನೇ ಸಾಲಿನ ಮೇಲ್ವಿಚಾರಕೇತರ ಮತ್ತು ದರ್ಗೆ 4 ಸಿಬ್ಬಂದಿಗಳ ಅಂತರ್ ನಿಗಮ ವರ್ಗಾವಣೆಗೆ ಸುತ್ತೋಲೆ ಹೊರಡಿಸಿದೆ. ವರ್ಗಾವಣೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 1 ರ 11 ಗಂಟೆಯಿಂದ ಆರಂಭವಾಗಿದ್ದು, ಜನವರಿ 31 ರ ಸಂಜೆ 5.30 ರವರೆಗೆ ಚಾಲ್ತಿಯಲ್ಲಿರಲಿದೆ.

ತೀವ್ರತರಹದ ಅನಾರೋಗ್ಯ, ಪತಿ, ಪತ್ನಿ, ಅಂಗವಿಕಲ ಸಿಬ್ಬಂದಿ ಮತ್ತು ಪರಸ್ಪರ ಹೊಂದಾಣಿಕೆಯ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು www.ksrtc.org/transfer ಮೂಲಕ ಸಲ್ಲಿಸಬಹುದು.


Share It

You cannot copy content of this page