ಶಿವಮೊಗ್ಗ: ಸಾಲಭಾದೆಗೆ ಮತ್ತೊಬ್ಬ ರೈತ ಬಲಿ
ಶಿವಮೊಗ್ಗ: ಸಾಲದ ಭಾದೆಯಿಂದಾಗಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ.
ಹೊಸನಗರ ತಾಲೂಕಿನ ಘನಂದೂರಿನ ರೈತ ಪುಟ್ಟನಾಯ್ಕ್ ಆತ್ಮಹತ್ಯೆ ಮಾಡಿಕೊಂಡವರು. ಇವರು ಬ್ಯಾಂಕ್ ಸೇರಿ ವಿವಿಧ ಸಂಘಸAಸ್ಥೆಗಳು, ಮೈಕ್ರೋ ಫೈನಾನ್ಸ್ಗಳಿಂದ 17 ಲಕ್ಷ ಸಾಲ ಪಡೆದಿದ್ದರು. ಬೆಳೆ ಸರಿಯಾಗಿ ಬರದ ಕಾರಣಕ್ಕೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೈಕ್ರೋ ಫೈನಾನ್ಸ್ ಅಥವಾ ಯಾವುದಾದರೂ ಸಾಲಗಾರರ ಕಿರುಕುಳವಿತ್ತಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


