ರಾಜಕೀಯ ಸುದ್ದಿ

ಮತ ಹಾಕಿದವರ ಮನೆ ಮನೆಗೆ ಮಾಂಸ: ಯಾರೆಲ್ಲ ಅರ್ಹರು? ಇಲ್ಲಿದೆ ಮಾಹಿತಿ

Share It

ತೆಲಂಗಾಣ : ಚುನಾವಣೆಯಲ್ಲಿ ಅಭ್ಯರ್ಥಿಗಳು ಜನರ ವಿಶ್ವಾಸ ಗಳಿಸಲು ಹಣ, ಆಭರಣಗಳು, ಪೂಜಾ ಸಾಮಗ್ರಿಗಳು ಅಥವಾ ಇತರೆ ವಸ್ತುಗಳನ್ನು ನೀಡುತ್ತಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ಮನೆ ಮನೆಗೆ ಮಾಂಸ ಕಳುಹಿಸಿಕೊಟ್ಟಿರುವ ಘಟನೆ ಸಂಗಾರೆಡ್ಡಿ ಜೆಲ್ಲೆಯ ಮಂಡಲ ಗುಂತಪಲ್ಲಿಯಲ್ಲಿ ನಡೆದಿದೆ.

ಹೌದು ತೆಲಂಗಾಣದ ಬಿಆರ್‌ಎಸ್ ಪಕ್ಷದ ಯುವ ಮುಖಂಡ ಅನಂತ ರೆಡ್ಡಿ ಮನೆ ಮನೆಗೆ ಹಬ್ಬಕ್ಕೆ ಉಡುಗೊರೆಯಾಗಿ ಕುರಿಯ ಮಾಂಸವನ್ನು ಸ್ಟೀಲ್ ಪೆಟ್ಟಿಗೆಯಲ್ಲಿ ಇಟ್ಟು ಕೊಟ್ಟಿದ್ದಾರೆ. ಗ್ರಾಮದ ಸುಮಾರು 400 ಕುಟುಂಬಗಳಿಗೆ ಮಾಂಸ ಹಾಗೂ 40 ಕುಟುಂಬಗಳಿಗೆ ಇತರ ಸಾಮಗ್ರಿಗಳನ್ನು ನೀಡಿದ್ದಾರೆ.

ಅನಂತ ರೆಡ್ಡಿ ಈ ಹಿಂದೆಯೂ ಜನರಿಕೆ ಸಂಕಷ್ಟ ಎದುರಾದಾಗ ಸಹಾಯ ಹಸ್ತ ನೀಡಿದ್ದರು. ಕೋವಿಡ್ ವೇಳೆ ಮನೆ ಮನೆಗೆ ಉಚಿತವಾಗಿ ಆಹಾರದ ಕಿಟ್ ವಿತರಣೆ ಮಾಡಿದ್ದರು. ಸದ್ಯ ಇವರು ಮಾಡಿರುವ ಈ ಕೆಲಸ ಗ್ರಾಮದ ಜನರಲ್ಲಿ ಸಂತಸ ತಂದಿದೆ. ಆದರೆ ರಾಜಕೀಯ ವಲಯದಲ್ಲಿ ಬೇರೆಯದ್ದೇ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ತೋರುತ್ತಿದೆ.

ಇನ್ನು ತೆಲಂಗಾಣದಲ್ಲಿ ಕಮನ ಹಬ್ಬವನ್ನು ಮಾಂಸದಿAದಿಗೆ ಆಚರಣೆ ಮಾಡುತ್ತಾರೆ. ಮಾಂಸಕ್ಕೆ ಬಹಳಷ್ಟು ಬೇಡಿಕೆ ಇರುವುದರಿಂದ ಮಾಂಸ ಕೊಳ್ಳಲು ಕಷ್ಟ ಪಡಬೇಕಿತ್ತು. ಆದರೆ ಇದೀಗ ಆ ಪ್ರಮೇಯ ಇಲ್ಲ ಎಂದು ಜನರು ಹೇಳುತ್ತಾರೆ.


Share It

You cannot copy content of this page