ಸಿಡ್ನಿ: 5 ಪಂದ್ಯಗಳ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಮತ್ತೊಂದು ಸೋಲು ಕಂಡಿದ್ದು, ಸರಣೀಯನ್ನು 3-1 ರಿಂದ ಕಳೆದುಕೊಂಡಿದೆ.
ಅಂತಿಮ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 186 ರನ್‌ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ, ಆಸ್ಟ್ರೇಲಿಯಾ ತಂಡವನ್ನು 181 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಮೇಲುಗೈ ಸಾಧಿಸಿತ್ತು. ಭಾರತದ ಬೌಲರ್‌ಗಳ ಈ ಪರಾಕ್ರಮವನ್ನು ಉಳಿಸಿಕೊಳ್ಳುವಲ್ಲಿ ಬ್ಯಾಟರ್‌ಗಳು ವಿಫಲವಾದರು.
ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸಿದ ಭಾರತ ತಂಡ 157 ರನ್ ಗಳೀಗೆ ಆಲೌಟ್ ಆಗುವ ಮೂಲಕ ಹಿನ್ನಡೆ ಅನುಭವಿಸಿತು. 162 ರನ್ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ ಬ್ಯಾಟರ್ ಗಳು ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿದರು. ಆ ಮೂಲಕ ಐದು ಪಂದ್ಯಗಳ ಸರಣಿಯನ್ನು3-1 ರಿಂದ ಗೆದ್ದು ಬೀಗಿದರು.
ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಸರಣಿಯುದ್ದಕ್ಕೂ ವೈಫಲ್ಯ ಅನುಭವಿಸಿದ್ದು ಭಾರತದ ಸರಣಿ ಸೋಲಿಗೆ ಕಾರಣವಾಯ್ತು ಎನಬ್ನಬಹುದು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ, ಶುಬಮನ್ ಗಿಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್ ಮತ್ತು ರಿಷಬ್ ಪಂತ್ ಹಾಗೂ ರೆಡ್ಡಿ ಅಲ್ಪಮಟ್ಟಿಗೆ ಬ್ಯಾಟಿಂಗ್‌ನಲ್ಲಿ ಮಿಂಚಿದರು.