ಜೈಪುರ: ಕುಂಭಮೇಳದಲ್ಲಿ ಐಐಟಿ ಬಾಬಾ ಎಂದೇ ಪ್ರಖ್ಯಾತಿ ಗಳಿಸಿದ್ದ ಅಭಯ್ ಸಿಂಗ್‌ನನ್ನು ಮಾಧಕ ವಸ್ತು ಮಾರಾಟ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಜೈಪುರದ ಲಾಡ್ಜ್ನಲ್ಲಿ ಪೊಲೀಸರು ಐಐಟಿ ಬಾಬಾ ಎಂದು ಹೆಸರುಗಳಿಸಿದ್ದ ಅಭಯ್ ಸಿಂಗ್ ನನ್ನು ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಬಂಧನ ಮಾಡಿದ್ದಾರೆ.
ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅಭಯ್ ಸಿಂಗ್, ಕಳೆದ ಕುಂಭಮೇಳದ ವೇಳೆ ತನ್ನ ವಿದ್ಯಾಭ್ಯಾಸದ ಬಗ್ಗೆ ಮಾತನಾಡಿ, ಸನಾತನ ಸಂಸ್ಕೃತಿಯ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದರು. ಅವರ ಮಾತುಗಳು ವೈರಲ್ ಆಗಿದ್ದವು. ಹೀಗಾಗಿ, ದೇಶಾದ್ಯಂತ ಐಐಟಿ ಬಾಬಾ ಎಂದೇ ಖ್ಯಾತಿ ಗಳಿಸಿದ್ದರು.