ದುಬೈ: ನಾಳೆ ಮಾರ್ಚ್ 9 ರ ಮಧ್ಯಾಹ್ನ 2 ಗಂಟೆಯಿಂದ ಯುಎಇ ದೇಶದ ರಾಜಧಾನಿ ದುಬೈನ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ ಫೈನಲ್‌ಗೆ ಮುನ್ನ ಅಭ್ಯಾಸದ ವೇಳೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಮೊಣಕಾಲಿಗೆ ಗಾಯವಾಗಿದೆ.
ಪಾಕಿಸ್ತಾನಿ ಮಾಧ್ಯಮಗಳ ವರದಿಯ ಪ್ರಕಾರ, ವೇಗದ ಬೌಲಿಂಗ್ ವಿರುದ್ಧ ಬ್ಯಾಟಿಂಗ್ ಅಭ್ಯಾಸದ ವೇಳೆ ಚೆಂಡು ಕೊಹ್ಲಿ ಅವರ ಮೊಣಕಾಲಿಗೆ ಬಡಿದಿದೆ. ಆದರೂ, ಕೊಹ್ಲಿ ಮೊಣಕಾಲಿನ ಗಾಯ ಗಂಭೀರವಾಗಿಲ್ಲ ಎಂದು ಟೀಂ ಇಂಡಿಯಾ ಫಿಸಿಯೋ ತರಬೇತುದಾರ ತಿಳಿಸಿದ್ದಾರೆ. ಇದರಿಂದ ಕೊಹ್ಲಿ ಫಿಟ್ ಆಗಿ ನಾಳೆ ಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಆಡುವ ನಿರೀಕ್ಷೆಯಿದೆ.
ಐಸಿಸಿ ಕ್ರಿಕೆಟ್ ಟ್ರೋಫಿ ಪಂದ್ಯಾವಳಿಯಲ್ಲಿ ಈವರೆಗೆ ನ್ಯೂಜಿಲೆಂಡ್ ವಿರುದ್ಧ ಭಾರತ 3-1 ಗೆಲುವು ಸಾಧಿಸಿ ಮುನ್ನಡೆ ಹೊಂದಿದೆ. ಇಷ್ಟಾದರೂ ಒಟ್ಟಾರೆ ನ್ಯೂಜಿಲೆಂಡ್ ಈವರೆಗೆ ಭಾರತ ವಿರುದ್ಧ 10-6 ಪಂದ್ಯಗಳಿಂದ ಮುನ್ನಡೆ ಸಾಧಿಸಿದೆ.