ಬೆಂಗಳೂರು: ಮಾರ್ಚ್ ೨೨ ರಂದು ನಡೆಯುವ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿ ರ‍್ಯಾಲಿ ನಡೆಸುತ್ತಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ ೨೨ರಂದು ಕರ್ನಾಟಕ ಬಂದ್ ನಡೆಸಲು ತೀರ್ಮಾನಿಸಲಾಗಿದೆ. ಈ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಮತ್ತಷ್ಟು ಜನರ ಬೆಂಬಲ ಯಾಚಿಸಿ, ರ‍್ಯಾಲಿ ನಡೆಸಿದ ವಾಟಾಳ್ ನಾಗರಾಜ್, ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರು.
ಈ ವೇಳೆ ಪೊಲೀಸರು ಅವರನ್ನು ಬಂಧಿಸಿ, ವಶಕ್ಕೆ ಪಡೆದಿದ್ದಾರೆ. ಬಂದ್ ನಡೆಸುವುದು ಶತಸಿದ್ಧ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದು, ಕೆಲವು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದರೆ, ಮತ್ತೇ ಕೆಲವು ಸಂಘಟನೆಗಳು ಬಾಹ್ಯ ಬೆಂಬಲ ಸೂಚಿಸಿವೆ.