ತಿಪಟೂರು: ತೆಂಗಿನ ಕಾಯಿ ಫ್ಯಾಕ್ಟರಿಯ ನೀರಿನ ಗುಂಡಿಗೆ ಬಿದ್ದು ಎರಡು ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ತಿಪಟೂರು ಸಮೀಪ ನಡೆದಿದೆ.
ತಿಪಟೂರು ತಾಲೂಕಿನ ಮೀಸೆತಿಮ್ಮನಹಳ್ಳಿಯಲ್ಲಿರುವ ಮಾನ್ಯಶ್ರೀ ತೆಂಗಿನಕಾಯಿ ಫ್ಯಾಕ್ಟರಿಯಲ್ಲಿ ಎರಡು ವರ್ಷದ ಕುಸುಮಾಕುಮಾರಿ ಎಂಬ ಮಗು ನೀರಿನ ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದೆ.
ಬಿಹಾರ ಮೂಲದ ಕಾರ್ಮಿಕರಾದ ಹರೀಂದ್ರ ಕುಮಾರ್ ಮತ್ತು ರೀನಾದೇವಿ ದಂಪತಿಯ ಮಗು ಇದಾಗಿದ್ದು, ಅವರು ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.
ಘಟನೆ ಸಂಬAಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫ್ಯಾಕ್ಟರಿಗೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.