ಬೆಂಗಳೂರು: ಮಂಡ್ಯ ಮೂಲದ ದಂಪತಿಗೆ ಚಿನ್ನಾಭರಣ ಸಏರಿ ಕೋಟ್ಯಾಂತರ ರುಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಮತ್ತು ಆಕೆಯ ಪತಿಯ ವಿಚಾರಣೆ ಇಂದು ನಡೆಯಲಿದೆ.
ಮಂಡ್ಯದ ರವಿಕುಮಾರ್ ಮತ್ತು ಪೂರ್ಣಿಮಾ ಎಂಬುವವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ಸೈಬರ್ ಠಾಣೆ ಪೊಲೀಸರು, ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಹರೀಶ್‌ಗೆ ನೊಟೀಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಯಲಿದೆ.
ಮಂಡ್ಯದಲ್ಲಿ ದಾಖಲಾಗಿದ್ದ ದೂರನ್ನು ಸೈಬರ್ ಠಾಣೆಗೆ ವರ್ಗಾವಣೆ ಮಾಡಿಕೊಂಡು, ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮಂಡ್ಯ ಎಸ್‌ಪಿ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಡಿವೈಎಸ್‌ಪಿ ನೊಟೀಸ್ ನೀಡಿದ್ದು, ಇಂದು ವಿಚಾರಣೆ ನಡೆಯಲಿದೆ.
ಪ್ರಕರಣದಲ್ಲಿ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ರವಿಕುಮಾರ್ ಮತ್ತು ಪೂರ್ಣಿಮಾ ಎಂಬುವವರಿಗೆ 55 ಲಕ್ಷ ರುಪಾಯಿಗಳ ಚಿನ್ನಾಭರಣ ಸೇರಿದಂತೆ ಕೋಟ್ಯಂತರ ರು. ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.