ಅಪರಾಧ ಸುದ್ದಿ

ಬೆಂಗಳೂರು ಏರ್‌ಪೋರ್ಟ್ನಲ್ಲಿ ಸ್ಟೈಲ್ ನಲ್ಲಿ ಬೆಲೆಬಾಳುವ ವಾಚ್ ಕದ್ದ ಭೂಪ

Share It

ಬೆಂಗಳೂರು: ಏರ್‌ಪೋರ್ಟ್ ಅಂದ್ರೆ ಬಿಗಿಭದ್ರತೆಯ ತಾಣ. ಆದರೆ, ಕಿಲಾಡಿಯೊಬ್ಬ ಏರ್‌ಪೋರ್ಟ್ನ ಮಳಿಗೆಯೊಂದರಲ್ಲಿ ಬೆಲೆಬಾಳುವ ವಾಚ್ ಕದ್ದು, ಸಿನಿಮಾ ಸ್ಟೈಲ್ ನಲ್ಲಿ ನೀವು ನನ್ನನ್ನೆಂದು ಮರೆಯುವುದಿಲ್ಲ’ ಎಂದು ಬರೆದಿಟ್ಟು ಪರಾರಿಯಾಗಿದ್ದಾನೆ.

34 ವರ್ಷದ ಬ್ರೆಜಿಲ್ ಪ್ರಜೆ ರವಿಗಾಮ ಡಿ ಸಾ ರವಿ ಎಂಬ ವ್ಯಕ್ತಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ತೆರಿಗೆ ರಹಿತ ಶೋರೂಮ್‌ನಲ್ಲಿ 3.3 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಎರಡು ಕೈಗಡಿಯಾರಗಳನ್ನು ಕದ್ದಿದ್ದಾನೆ. ಜತೆಗೆ, “ನೀವು ನನ್ನನ್ನು ಎಂದಿಗೂ ಮರೆಯುವುದಿಲ್ಲ” ಎಂಬ ಸಾಲು ಬರೆದಿಟ್ಟು ಪರಾರಿಯಾಗಿದ್ದಾನೆ.

ಮಳೀಗೆಯ ಸಿಬ್ಬಂದಿ ಎರಡು ದಿನಗಳ ನಂತರ ಕಳ್ಳತನ ನಡೆದಿರುವುದನ್ನು ಪತ್ತೆ ಹಚ್ಚಿದ್ದಾರೆ. ಜನವರಿ 4 ರಂದು ಈ ಘಟನೆ ನಡೆದಿದ್ದು, ಟರ್ಮಿನಲ್ 2 ರ ನೆಲ ಮಹಡಿಯ ವಾಚ್ ಬಾಟಿಕ್ ಎಥೋಸ್ ಸಮ್ಮಿಟ್‌ನಲ್ಲಿ ಕಳ್ಳತನ ನಡೆದಿದೆ, ಆದರೆ ಅಂಗಡಿಯ ಸಿಬ್ಬಂದಿ ಶರಣಪ್ಪ ನಾಡ್ ಜ.13 ರಂದು ಕೆಐಎ ಪೊಲೀಸರಿಗೆ ದೂರು ನೀಡಿದ್ದಾರೆ.

ರವಿ ಸುಮಾರು 12.50 ರ ಸುಮಾರಿಗೆ ಅಂಗಡಿಗೆ ತೆರಳಿದ್ದು, ಮಳಿಗೆಯ ಸಿಬ್ಬಂದಿ ಇಳಯರಾಜ ಅವರನ್ನು ಭೇಟಿ ಮಾಡಿದರು. ರವಿ ಅವರಿಗೆ ಕೆಲವು ಮಾಡೆಲ್‌ಗಳನ್ನು ತೋರಿಸಲು ಇಳಯರಾಜರನ್ನು ಕೇಳಿದರು. ಅವರು Tag Heuer ಗಡಿಯಾರವನ್ನು ಆಯ್ಕೆ ಮಾಡಿ ಅದರ ಬಿಲ್ ಅನ್ನು ಪಾವತಿಸಿದರು.

ನಂತರ, ಸುಮಾರು 1000 ಡಾಲರ್ ಬೆಲೆಬಾಳುವ ಕೈಗಡಿಯಾರಗಳನ್ನು ತೋರಿಸಲು ಇಳಯರಾಜರನ್ನು ಕೇಳಿ, ಇಳಯರಾಜ ಅವರು ಶೋಕೇಸ್‌ನಿಂದ ವಾಚ್‌ಗಳನ್ನು ತೆಗೆಯುತ್ತಿದ್ದಾಗ, ರವಿ ಅವರು 84,500 ರೂಪಾಯಿ ಮೌಲ್ಯದ ಫ್ರೆಡ್ರಿಕ್ ಕಾನ್‌ಸ್ಟಂಟ್ ಕೈಗಡಿಯಾರ (ಮಾಡೆಲ್ ಸಂಖ್ಯೆ ಎಫ್‌ಸಿ-270 ಎನ್ 4 ಪಿ6 ಬಿ)ವನ್ನು ಜೇಬಿಗಿಳಿಸಿದ್ದಾರೆ.

ಸುಮಾರು ಮೂರು ದುಬಾರಿ ಕೈಗಡಿಯಾರಗಳನ್ನು ಆಯ್ಕೆ ಮಾಡಿದ ಆತ, ಅಂಗಡಿಯಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಕಳೆದಿದ್ದಾನೆ. ಇತ್ತ ಇಳಯರಾಜಾ ಮೂರು ವಾಚ್‌ಗಳಿಗೆ ಬಿಲ್ ಮಾಡುತ್ತಿದ್ದಾಗ, ರವಿ ಅವರು ಇಳಯರಾಜ ಅವರಿಗೆ ವಾಚ್‌ಗಳನ್ನು ತೋರಿಸಿದ ಟೇಬಲ್‌ನಲ್ಲಿ ಪಾಸ್‌ಪೋರ್ಟ್ ಮತ್ತು ಬೋರ್ಡಿಂಗ್ ಪಾಸ್ ಅನ್ನು ಇಟ್ಟಿದ್ದರು.

ಪಾಸ್‌ಪೋರ್ಟ್ ಎತ್ತಿಕೊಳ್ಳುವ ನೆಪದಲ್ಲಿ ರವಿ, 2.4 ಲಕ್ಷ ಮೌಲ್ಯದ ಮತ್ತೊಂದು ಫ್ರೆಡ್ರಿಕ್ ಕಾನ್‌ಸ್ಟೆಂಟ್ (ಮಾಡೆಲ್ ಸಂಖ್ಯೆ ಎಫ್‌ಸಿ 303 ಎಟಿ3 ಡಿಎನ್‌ಎಚ್6) ವಾಚ್ ಕದ್ದು ತನ್ನ ವ್ಯಾಲೆಟ್‌ನಲ್ಲಿ ಇಟ್ಟುಕೊಂಡಿದ್ದಾನೆ. ರವಿ ಅವರು ಇಳಯರಾಜ ಅವರಿಗೆ ನೀವು ನನ್ನನ್ನು ಎಂದಿಗೂ ಮರೆಯುವುದಿಲ್ಲ. ಅತ್ಯುತ್ತಮ ವಿದೇಶಿ ಗ್ರಾಹಕರಲ್ಲಿ ನಾನೊಬ್ಬ ಎಂದು ಫಿಲ್ಮಿ ಡೈಲಾಗ್ ಹೊಡೆದಿದ್ದಾರೆ.

ನಂತರ ತರಾತುರಿಯಲ್ಲಿ, ತಡವಾಗುತ್ತಿದೆ ಎಂದು ಹೇಳಿ, ಬಿಲ್ ಪಾವತಿಸಿ ಹೊರಟಿದ್ದಾರೆ. ಸಿಬ್ಬಂದಿ ಕೈಗಡಿಯಾರಗಳನ್ನು ಮತ್ತೆ ಶೋಕೇಸ್‌ಗೆ ಹಾಕಿದ್ದು, ಎರಡು ದಿನಗಳ ನಂತರ, ದಾಸ್ತಾನು ಪರಿಶೀಲಿಸುತ್ತಿದ್ದ ವೇಳೆ ಎರಡು ಕೈಗಡಿಯಾರ ಕಾಣೆಯಾಗಿರುವುದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ರವಿ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.

ರವಿ ಅಂಗಡಿಯಿAದ ನಾಲ್ಕು ವಾಚ್‌ಗಳನ್ನು ಖರೀದಿಸಿದ್ದು, ಇದಕ್ಕಾಗಿ 8 ಲಕ್ಷ ರು ಪಾವತಿ ಮಾಡಿದ್ದಾರೆ. ಆದರೆ, ಇನ್ನೆರೆಡು ವಾಚ್‌ಗಳನ್ನು ಜೇಬಿಗಿಳಿಸಿದ್ದಾರೆ. ಈತ ಕದ್ದಿರುವ ಎರಡು ವಾಚ್ ಗಳ ಮೌಲ್ಯ ಸುಮಾರು 3.3 ಲಕ್ಷ ರೂ. ಆಗಿದೆ. ಈ ಸಂಬAಧ ದೂರು ನೀಡಲಾಗಿದ್ದು, ಬಿಎನ್‌ಎಸ್ 305 ಅಡಿ ಪ್ರಕರಣ ದಾಖಲಾಗಿದೆ.

“ಆರೋಪಿ ಯಾವ ವೀಸಾದಲ್ಲಿ ಭಾರತಕ್ಕೆ ಬಂದಿದ್ದರು ಎಂದು ಪರಿಶೀಲನೆ ಮಾಡಲಾಗುತ್ತಿದೆ. ಈಗಾಗಲೇ ಅವರು ಬ್ರೆಜಿಲ್‌ನಲ್ಲಿ ಇರುವುದರಿಂದ ನಾವು ಏನೂ ಮಾಡಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಬೆಂಗಳೂರಿಗೆ ಭೇಟಿ ನೀಡಿದರೆ, ನಾವು ಕ್ರಮ ತೆಗೆದುಕೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.


Share It

You cannot copy content of this page