ಬೆಂಗಳೂರು: ನಾ ಮಕ್ಕಳ ಕಳ್ಳಿಯಲ್ಲ…ನ್ಯಾಯಾಲಯ ನನ್ನನ್ನು ನಿರಪರಾಧಿ ಎಂದು ತೀರ್ಪು ನೀಡಿದೆ. ಆದರೂ, ನನ್ನನ್ನು ತುಳಿಯಲು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು ಎಂದು ಬಿಗ್ ಬಾಸ್ ಖ್ಯಾತಿಯ ನಟಿ ಮೋಕ್ಷಿತಾ ಪೈ ತಿಳಿಸಿದ್ದಾರೆ.
ಸಂದರ್ಶನವೊAದರಲ್ಲಿ ಮಾತನಾಡಿರುವ ಅವರು, ತಮ್ಮ ಹಳೆಯ ವಿಡಿಯೋ ವೈರಲ್ ಮಾಡಿದ್ದಕ್ಕೆ ಸ್ಪಷ್ಟನೆ ನೀಡುತ್ತಾ ಮಾತನಾಡಿ, ನನ್ನ ಮೇಲೆ ಆರೋಪ ಬಂದಿದ್ದು ನಿಜ. ಆದರೆ, ಅದರಲ್ಲಿ ಸತ್ಯ ಏನೆಂಬುದು ನನಗೆ ಮಾತ್ರ ಗೊತ್ತಿದೆ. ನ್ಯಾಯಾಲಯ ನನ್ನನ್ನು ಆರೋಪಮುಕ್ತಗೊಳಿಸಿದೆ ಎಂದು ತಿಳಿಸಿದ್ದಾರೆ.
ಇಷ್ಟೆಲ್ಲ ಇದ್ದರೂ, ನಾನು ಬಿಗ್ ಬಾಸ್ ಮನೆಯಲ್ಲಿದ್ದಾಗ ನನ್ನ ಬಗ್ಗೆ ಕೆಟ್ಟ ಪ್ರಚಾರ ನಡೆದಿದೆ. ಇದು ನನ್ನನ್ನು ತುಳಿಯಲು ನಡೆದ ಪ್ರಯತ್ನ ಎಂಬುದು ಇದರಿಂದ ಗೊತ್ತಾಗುತ್ತದೆ. ಆದರೂ ನನ್ನ ಅಭಿಮಾನಿಗಳು ನನ್ನ ಕೈಬಿಟ್ಟಿಲ್ಲ. ಬಿಗ್ ಬಾಸ್ ಮನೆಯಲ್ಲಿ ನನ್ನಷ್ಟಕ್ಕೆ ನಾನು ಜೀವಿಸಿ, ಐದನೇ ಸ್ಥಾನ ಪಡೆದಿದ್ದೇನೆ. ಇದು ನನಗೆ ಹೆಮ್ಮಯಿದೆ ಎಂದಿದ್ದಾರೆ.
ಮೋಕ್ಷಿತಾ ಬಿಗ್ ಬಾಸ್ ಮನೆಯಲ್ಲಿದ್ದಾಗ ಹಳೆಯ ನ್ಯೂಸ್ ತುಣುಕೊಂದನ್ನು ವೈರಲ್ ಮಾಡಲಾಗಿತ್ತು. ಮೋಕ್ಷಿತಾ ಮೇಲಿನ ಹಿಂದಿನ ಪ್ರಕರಣವೊಂದರ ನ್ಯೂಸ್ ವಿಡಿಯೋ ಇಟ್ಟುಕೊಂಡು ಅಪಪ್ರಚಾರ ನಡೆದಿತ್ತು. ಈ ಬಗ್ಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ಮೋಕ್ಷಿತಾ ಸ್ಪಷ್ಟನೆ ನೀಡಿದ್ದಾರೆ.