ಬೆಂಗಳೂರು : ವಿಶ್ವದ ದೊಡ್ಡಣ್ಣ ಎಂದು ಕರೆಯುವ ಅಮೆರಿಕ ಬೆಂಗಳೂರಿನಲ್ಲಿ ರಾಯಭಾರಿ ಕಚೇರಿ ತೆರೆದಿದೆ. ಈಗ ವಿಶ್ವದ ಮತ್ತೊಂದು ದೇಶ ಬೆಂಗಳೂರಿನಲ್ಲಿ ತಮ್ಮ ಕಚೇರಿ ತೆರೆಯಲು ನಿರ್ಧರಿಸಿದೆ.
ಹೌದು, ಭಾರತೀಯ ವಿದೇಶಾಂಗ ಸಚಿವ ಜಯಶಂಕರ್ ಹೇಳಿರುವಂತೆ ಸ್ಪೇನ್ ದೇಶವು ತನ್ನ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆಯಲಿದೆ. ಇದರಿಂದಾಗಿ ಎರಡು ದೇಶಗಳ ನಡುವೆ ಸಂಬಂಧಗಳು ಗಟ್ಟಿಯಾಗುತ್ತದೆ ಎಂದು ಹೇಳಿದ್ದಾರೆ.
ಸ್ಪೇನ್ ನ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ಭಾರಕ್ಕೆ ಭೇಟಿ ನೀಡಿ ಎರಡೂವರೆ ತಿಂಗಳ ಬಳಿಕ ಭಾರತದ ವಿದೇಶಾಂಗ ಸಚಿವ ಸ್ಪೇನ್ ಗೆ ಭೇಟಿ ನೀಡಿದರು. 2026 ಎರಡು ದೇಶಗಳ ನಡುವೆ ಒಳ್ಳೆಯ ಪ್ರಗತಿಯ ವರ್ಷವಾಗಲಿದೆ ಎಂದು ಜೈ ಶಂಕರ್ ಹೇಳಿದ್ದಾರೆ.
ಸಭೆಯಲ್ಲಿ ಎರಡು ದೇಶಗಳ ವಿವಿಧ ಪ್ರಾದೇಶಿಕ ಹಾಗೂ ಅಂತರ್ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಸದ್ಯ ಭಾರತದಲ್ಲಿ 230 ಸ್ಪ್ಯಾನಿಶ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ನಿಮ್ಮೊಂದಿಗೆ ಸದ್ಯ ಕೈ ಜೋಡಿಸಲು ನಾವು ಸಿದ್ಧ ಎಂದು ಪೆಡ್ರೊ ಸ್ಯಾಂಚೆಜ್ ಭರವಸೆ ನೀಡಿದ್ದಾರೆ.