ಉಪಯುಕ್ತ ಸುದ್ದಿ

ಕೇಂದ್ರ ಸರಕಾರಿ ನೌಕರರಿಗೆ ಗುಡ್ ನ್ಯೂಸ್ : ಎಂಟನೇ ವೇತನ ಆಯೋಗ ರಚನೆಗೆ ಗ್ರೀನ್ ಸಿಗ್ನಲ್

Share It

ನವದೆಹಲಿ : ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಸವಲತ್ತುಗಳನ್ನು ಪರಿಷ್ಕರಿಸಲು 8 ನೇ ವೇತನ ಆಯೋಗ ರಚನೆ ಮಾಡಲು ಕೇಂದ್ರ ಸರ್ಕಾರ ಗುರುವಾರ ಅನುಮೋದನೆ ನೀಡಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊAಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, “ಕೇಂದ್ರದ ಎಲ್ಲ ಸರ್ಕಾರಿ ನೌಕರರಿಗೆ ಅನುಕೂಲ ಒದಗಿಸುವ ಸಲುವಾಗಿ 8 ನೇ ವೇತನ ಆಯೋಗ ರಚಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.

1947 ರಲ್ಲಿ ಭಾರತ ಸ್ವಾತಂತ್ರ‍್ಯ ಪಡೆದ ನಂತರ, ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಸವಲತ್ತು ಪರಿಷ್ಕರಿಸಲು ಇಲ್ಲಿಯವರೆಗೂ 7 ವೇತನ ಆಯೋಗಗಳನ್ನು ರಚಿಸಲಾಗಿದೆ. ಈ ಆಯೋಗವು ಇನ್ನೂ ಅಸ್ತಿತ್ವದಲ್ಲಿದ್ದು, 8 ನೇ ಆಯೋಗಕ್ಕೆ ಪ್ರಧಾನಿ ಮೋದಿ ಅನುಮೋದನೆ ನೀಡಿದ್ದಾರೆ. ಇದು ಅವರ ಕೆಲಸದ ಶಿಸ್ತು ತೋರಿಸುತ್ತದೆ. 8 ನೇ ಕೇಂದ್ರ ವೇತನ ಆಯೋಗವನ್ನು 2016 ರಲ್ಲಿ ರಚಿಸಲಾಯಿತು. 2026 ರಲ್ಲಿ ಅದರ ಅವಧಿ ಪೂರ್ಣಗೊಳ್ಳಲಿದೆ ಎಂದು ಸಚಿವರು ಹೇಳಿದರು.

2025 ಕ್ಕಿಂತ ಮುಂಚೆಯೇ 8 ನೇ ಕೇಂದ್ರ ವೇತನ ಆಯೋಗ ಸ್ಥಾಪಿಸುವುದರಿಂದ ಅದರ ಶಿಫಾರಸುಗಳನ್ನು ಪರಿಶೀಲಿಸಲು ಮತ್ತು ಅಂತಿಮಗೊಳಿಸಲು ಸಾಕಷ್ಟು ಸಮಯ ಸಿಗುತ್ತದೆ. ಈ ಪೂರ್ವಭಾವಿ ಕ್ರಮವು 7ನೇ ವೇತನ ಆಯೋಗದ ಅವಧಿ ಮುಗಿಯುವ ಮೊದಲು ಪ್ರಸ್ತಾವಿತ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ ಎಂದರು.


Share It

You cannot copy content of this page