ಬೆಂಗಳೂರು: ಮಹಿಳೆಯ ಮೇಲೆ ನಾಲ್ವರು ಯುವಕರಿಂದ ಗ್ಯಾಂಗ್ ರೇಪ್ ಆರೋಪ ಕೇಳಿಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಕೋರಮಂಗಲದಲ್ಲಿ ಘಟನೆ ನಡೆದಿದ್ದು, ಗುರುವಾರ ತಡೆರಾತ್ರಿ ಮಹಿಳೆಯ ಬಳಿ ಬಂದ ನಾಲ್ವರು ಯುವಕರು ಪರಿಚಯಸ್ಥರಂತೆ ಊಟಕ್ಕೆ ಕರೆದಿದ್ದರು.
ಊಟಕ್ಕೆಂದು ಟರೇಸ್ ಮೇಲೆ ಕರೆದುಕೊಂಡು ಹೋಗಿ ಅಲ್ಲಿ ನಾಲ್ವರು ಯುವಕರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ಸಂಬAಧ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕೋರಮಂಗಲ ಪೊಲೀಸ್ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Updating…