ಬೆಂಗಳೂರು: ರಾಜಧಾನಿಯಲ್ಲಿ ಮನೆಮುಂದೆ ನಿಲ್ಲಿಸಿದ್ದ ಬೈಕ್ ಮುಂಜಾವಿನಲ್ಲಿ ಕಳವು ಮಾಡಿರುವ ಘಟನೆ ಸಾರಕ್ಕಿಯಲ್ಲಿ ನಡೆದಿದೆ.
ಸಾರಕ್ಕಿಯ ಮೂರನೇ ಮುಖ್ಯರಸ್ತೆಯಲ್ಲಿರುವ ರಘು ಎಂಬುವವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ನಸುಕಿನ ಜಾವ ೪.೩೦ಕ್ಕೆ ಕಳ್ಳರು ಬೈಕ್ ಕೊಂಡೊಯ್ದಿರುವ ಘಟನೆ ನಡೆದಿದೆ.
ದೃಶ್ಯ ಸಿಸಿಟಿವಿ ಕ್ಯಾಮರೆದಾಲ್ಲಿ ಸೆರೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬೈಕ್ ಮಾಲೀಕ ರಘು ಜಿ.ಪಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರರಕಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

