ಅಪರಾಧ ಸುದ್ದಿ

ಗಂಡನ ಜತೆ ಸಂಸಾರ ಮಾಡೋಕೆ ನಿತ್ಯ 5 ಸಾವಿರ ಬೇಡಿಕೆ: ಪತ್ನಿಯಿಂದಲೇ ಟಾರ್ಚರ್

Share It

ಬೆಂಗಳೂರು: ಗಂಡನ ಜತೆಗೆ ಸಂಸಾರ ಮಾಡಬೇಕಾದರೆ ನಿತ್ಯ 5000 ಕೊಡಬೇಕು ಎಂದು ಹೆಂಡತಿಯೇ ದಿನನಿತ್ಯ ಟಾರ್ಚರ್ ಕೊಡುತ್ತಿರುವ ಆರೋಪ ಕೇಳಿಬಂದಿದ್ದು, ನೊಂದ ಪತಿ ದೂರು ನೀಡಿರುವ ಪ್ರಕರಣ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.

ವೈಯ್ಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಪತ್ನಿಯ ಕಿರುಕುಳವನ್ನು ವಿಡಿಯೋ ಮೂಲಕ ಪತಿ ಬಿಚ್ಚಿಟ್ಟಿದ್ದಾರೆ. ಆಕೆ ನೀಡಿದ ಕಿರುಕುಳಕ್ಕೆ ಬೇಸತ್ತು ತಾವು ದೂರು ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ದಿನದ ಖರ್ಚಿಗೆ 5 ಸಾವಿರ ರುಪಾಯಿ ನೀಡಬೇಕು, ಬ್ಯೂಟಿ ಹಾಳಾಗುತ್ತೆ ನಮಗೆ ಮಕ್ಕಳು ಬೇಡ, ದತ್ತು ಮಕ್ಕಳು ಪಡೆಯೋಣ, 60 ವರ್ಷ ಆದ ಮೇಲೆ ಮಕ್ಕಳು ಮಾಡಿಕೊಳ್ಳೋಣ ಎಂದು ಪತಿಗೆ ಕಿರುಕುಳ ನೀಡಿರುವ ಕುರಿತು ದೂರು ನೀಡಲಾಗಿದೆ.

ನನಗೆ ಯಾವಾಗ ಮಕ್ಕಳು ಬೇಕು ಎನಿಸುತ್ತದೆಯೋ ಆಗ ಮಕ್ಕಳು ಮಾಡಿಕೊಳ್ಳೋಣ, ನಿನ್ನನ್ನು ನಾನು ಹತ್ತಿರಕ್ಕೆ ಸೇರಿಸುವುದೇ ಇಲ್ಲ ಅದೆಂಗೆ ಮಕ್ಕಳಾಗುತ್ತೋ ನಾನು ನೋಡ್ತೇನೆ, ಪಪ್ಪಾಯಿ, ಪೈನಾಪಲ್ ರೆಡಿ ಇಟ್ಕೋತ್ತೀನಿ ಎಂದು ಹೇಳುತ್ತಲೇ ಗಂಡನ ಜತೆಗೆ ಸಂಸಾರ ನಡೆಸಲು ನಿರಾಕರಿಸುತ್ತಾ ತನಗೆ ಟಾರ್ಚರ್ ನೀಡುತ್ತಿದ್ದಾಳೆ ಎಂದು ಪತಿ ದೂರು ನೀಡಿದ್ದಾರೆ.


Share It

You cannot copy content of this page