ಅಪರಾಧ ಸುದ್ದಿ

ಮನಾಲಿ ಪ್ರವಾಸ ಮಾಡಿದ್ದ ವಿಧವೆಯ ಟೀಕೆ : ಮುಸ್ಲಿಂ ಧರ್ಮ ಗುರುವಿನ ಮೇಲೆ ಮುಗಿಬಿದ್ದ ಕೇರಳ

Share It

ಕೊಚ್ಚಿ: ವಿಧವೆಯೊಬ್ಬರು ಮನಾಲಿ ಪ್ರವಾಸದ ವೇಳೆ ಪೋಸ್ಟ್ ಮಾಡಿದ್ದ ವಿಡಿಯೋ ಬಗ್ಗೆ ಟೀಕಿಸಿದ ಮುಸ್ಲಿಂ ಧರ್ಮಗುರುವಿನ ವಿರುದ್ಧ ಕೇರಳದ ಪ್ರಗತಿಪರ ಚಿಂತಕರು, ನೆಟ್ಟಿಗರು ಮುಗಿಬಿದ್ದಿದ್ದು, ಕ್ಷಮೆ ಕೋರಿ ಒಂದು ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಕೋಝೀಕ್ಕೋಡ್‌ನ 55 ವರ್ಷದ ವಿಧವೆ ನಬೀಸು ತನ್ನ ಮೂವರು ಹೆಣ್ಣುಮಕ್ಕಳ ಜತೆಗೆ ಮನಾಲಿ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ತಮ್ಮ ಇನ್ಸಾ÷್ಟಗ್ರಾಮ್ ಪುಟದಲ್ಲಿ ವಿಡಿಯೋ ಮಾಡಿ ಹಾಕಿದ್ದು, ಪ್ರವಾಸದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ತಮ್ಮ ಗೆಳೆತಿಯರ ಹೆಸರು ಹೇಳಿ, ನೀವೆಲ್ಲರೂ ಇಲ್ಲಿ ಬಂದು ನೋಡಿ ಎಂದಿದ್ದರು.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆ ಇದ್ದಕ್ಕಿದ್ದಂತೆ ಸ್ಟಾರ್ ಆಗಿದ್ದರು. ಇದೇ ಸಂದರ್ಭದಲ್ಲಿ “ಸುನ್ನಿ ವಾಯ್ಸ್’ ಉಸ್ತುವಾರಿ ಸಂಪಾದಕರೂ ಆದ ಧರ್ಮೋಪದೇಶಕ ಇಬ್ರಾಹಿಂ ಸಖಾಫಿ ಪುಳಕ್ಕತ್ತಿರಿ ತಮ್ಮ ಭಾಷಣದಲ್ಲಿ “ಗಂಡ ಸತ್ತ ನಂತರ ಮಹಿಳೆ ಮನೆಯಲ್ಲಿದ್ದುಕೊಂಡು ಪ್ರಾರ್ಥನೆ, ಪೂಜೆ ಮಾಡುವುದು ಬಿಟ್ಟು, ಬೇರೆ ರಾಜ್ಯದಲ್ಲಿ ಹಿಮದಲ್ಲಿ ಆಟವಾಡಲು ಹೋಗಿದ್ದಾರೆ’ ಎಂದು ಟೀಕಿಸಿದ್ದರು.

ಪುಳಕ್ಕತ್ತಿರಿ ಅವರ ಈ ಟೀಕೆಗೆ ಮುಸ್ಲಿಂ ಸಮುದಾಯವೂ ಸೇರಿ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಕೆಲ ಹಿಂಬಾಲಕರು ಅವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ನಬೀಸು ಅವರ ಪುತ್ರಿ ಜಿಫಿನಾ, ಧರ್ಮಗುರುವಿನ ಕ್ಷಮೆಗೆ ಆಗ್ರಹಿಸಿದ್ದಾರೆ. ಅವರ ಹೇಳಿಕೆಯಿಂದ ನಮ್ಮ ಕುಟುಂಬದ ಶಾಂತಿ ಹಾಳಾಗಿದೆ. ನನ್ನ ತಾಯಿಯ ಒಂದು ತೊಟ್ಟು ಕಣ್ಣೀರು ಬಿದ್ದರೂ ಅದಕ್ಕೆ ಧರ್ಮಗುರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಅವರ ಭಾಷಣದ ನಂತರ ನನ್ನ ತಾಯಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಹ ಹಿಂಝರಿಯುತ್ತಾರೆ. ವಿಧವೆಯೊಬ್ಬರು ಜಗತ್ತು ನೋಡುವುದನ್ನು ಏಕೆ ನಿರ್ಬಂಧಿಸಲಾಗಿದೆ? ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ. ಮುಸ್ಲಿಂ ಪ್ರಗತಿಪರ ಮಹಿಳಾ ಸಂಘವಾದ ಎನ್‌ಐಎಸ್‌ಎನ ವಿ.ಪಿ ಜುಹರಾ, ಪುಳಕ್ಕತ್ತಿರಿ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಟಿ ಮತ್ತು ವಕೀಲೆ ಸಿ.ಶುಕ್ಕೂರ್ ಅವರು, ಧಾರ್ಮಿಕ ನಾಯಕನ ಭಾಷಣಕ್ಕಾಗಿ ರಾಜ್ಯ ಮಹಿಳಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸಂವಿಧಾನದ 21 ನೇ ವಿಧಿಯು ವ್ಯಕ್ತಿಗಳಿಗೆ ಘಟನೆ ಮತ್ತು ಹೆಮ್ಮೆಯಿಂದ ಬದುಕುವ ಸ್ವಾತಂತ್ರö್ಯ ನೀಡಿದೆ. ಭಾಷಣದಿಂದ ಆ ಮಹಿಳೆಯ ಸಾರ್ವಜನಿಕ ಮತ್ತು ಕುಟುಂಬ ಜೀವನಕ್ಕೆ ತೊಂದರೆ ಮಾಡಿದ್ದಾರೆ. ಹೀಗಾಗಿ, ಅವರಿಗೆ 1 ಕೋಟಿ ರು.ಗಳ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ನಬೀಸು ಅವರು ತಮ್ಮ ಪುತ್ರಿಯರಾದ ಜಿಫಿನಾ, ಜಸಿಯಾ ಮತ್ತು ಜಂಶೀನಾ ಮತ್ತು ಮತ್ತೊಂದು ಟೀಂ 11 ದಿನಗಳ ಪ್ರವಾಸ ಕೈಗೊಂಡಿದ್ದರು. ಆಗ ಮೊನಾಲಿಯಲ್ಲಿ ವಿಡಿಯೋ ಮಾಡಿದ್ದ ನಬೀಸು, “ಹಜಾರಾ…ಸಫಿಯಾ..ನಸೀಮಾ…ಸಕೀನಾ…ನೀವೆಲ್ಲರೂ ಮನೆಯಲ್ಲಿದ್ದೀರಾ? ಇಲ್ಲಿ ಎಷ್ಟು ಮಜಾ..ಇದು ಅದ್ಭುತವಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದರು. ಪೊಲೀಮೂದ್ ನಬೀಸು ಎಂಬ ಇನ್ಸಾ÷್ಟ ಗ್ರಾಮ್ ಪೇಜ್ ಆರಂಭಿಸಿದ್ದರು.


Share It

You cannot copy content of this page