ವಿಜಯಪುರ: ಭೀಮಾ ತೀರದ ರೌಡಿ ಶೀಟರ್ ಭಾಗಪ್ಪ ಹರಿಜನ್‌ಗೆ ಗುಂಡಿಟ್ಟು ಕೊಲೆ ಮಾಡಿದ್ದು, ದ್ವೇಷ ದುಷ್ಟತನ ಬಿಟ್ಟು ಒಳ್ಳೆಯವನಾಗಲು ಹೊರಟಿದ್ದವನ ಹೆಣ ಬೀಳಿಸಿದೆ.
ವಿಜಯಪುರದ ಮದೀನಾ ನಗರದಲ್ಲಿ ಮನೆ ಬಾಡಿಗೆಗೆ ಪಡೆದು ಭಾಗಪ್ಪ ಹರಿಜನ್ ವಾಸ ಮಾಡುತ್ತಿದ್ದ. ರಾತ್ರಿ ಊಟ ಮುಗಿಸಿ, ಮನೆ ಮುಂಭಾಗದಲ್ಲಿ ವಾಕಿಂಗ್ ಮಾಡುವಾಗ ಹಂತಕರು, ದಾಳಿ ನಡೆಸಿ ಗುಂಡು ಹಾರಿಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಭಾಗಪ್ಪ ಹರಿಜನ್ ಸಾವನ್ನಪ್ಪಿದ್ದಾನೆ.
ಭೀಮಾ ತೀರದ ಹಂತಕ ಎಂದೇ ಖ್ಯಾತನಾಗಿದ್ದ ಭಾಗಪ್ಪ ಹರಿಜನ್, ತನ್ನ ಹಿಂದಿನ ಎಲ್ಲ ಕೃತ್ಯಗಳನ್ನು ಮರೆತು ತಾನು ಹೊಸ ಮನುಷ್ಯನಾಗಿ ಬದುಕುವ ಕನಸು ಕಂಡಿದ್ದ. ಹೀಗಾಗಿ, ವಿಜಯಪುರದಲ್ಲಿ ಮನೆ ಬಾಡಿಗೆಗೆ ಪಡೆದು ವಾಸ ಮಾಡುತ್ತಿದ್ದ. ಆದರೆ, ಹಳೆಯ ದ್ವೇಷ ಆತನನ್ನು ಬಲಿ ಪಡೆದಿದೆ.