ಕ್ರೀಡೆ ಸುದ್ದಿ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಶಕೀಬ್ ಅಲ್ ಹಾಸನ್ ನಿವೃತ್ತಿ ಘೋಷಣೆ !

Share It

ಬಾಂಗ್ಲಾದೇಶದ ಲೆಜೆಂಡರಿ ಆಲ್ ರೌಂಡರ್ ಹಾಗೂ ಹಲವು ವರ್ಷಗಳಿಂದ ಬಾಂಗ್ಲಾದೇಶದ ಕ್ರಿಕೆಟ್ ತಂಡವನ್ನು ಒಂದು ಹಂತಕ್ಕೆ ಕೊಂಡೊಯ್ದ ಶಕಿಬ್ ಅಲ್ ಹಸನ್ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂತರಾಷ್ಟ್ರೀಯ ಟೆಸ್ಟ್ ಜೀವನಕ್ಕೆ ಹಾಗೂ ಟಿ20 ಆವೃತ್ತಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಶುಕ್ರವಾರ ಕಾನ್ಪುರ ಅಂತರಾಷ್ಟ್ರೀಯ ಕ್ರಿಕೇಟ್ ಮೈದಾನದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಎರಡನೇ ಪಂದ್ಯವನ್ನು ಆಡಿ. ಬಳಿಕ ಬಾಂಗ್ಲಾದೇಶದ ಮೀರ್ಪುರದಲ್ಲಿ ಅಕ್ಟೋಬರ್ 21 ರಂದು ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯವು ತನ್ನ ಕೊನೆಯ ಪಂದ್ಯವೆಂದು ಘೋಷಣೆ ಮಾಡಿದ್ದಾರೆ.

ಈಗಾಗಲೇ ಟಿ20ವಿಶ್ವಕಪ್ ನಲ್ಲಿ ಆಡಿರುವುದೇ ನನ್ನ ಕೊನೆಯ ಟಿ20 ಪಂದ್ಯವೆಂದು ಹೇಳಿದ್ದಾರೆ. 2025ರ ಚಾಂಪಿಯನ್ ಟ್ರೋಫಿ ಬಳಿಕ ಏಕದಿನ ಕ್ರಿಕೆಟ್ ಆವೃತ್ತಿಗೂ ಸಹ ನಿವೃತ್ತಿ ಘೋಷಣೆ ಮಾಡುವೆ ಎಂದು ತಿಳಿಸಿದ್ದಾರೆ.

ಶಕೀಬ್ ಅಲ್ ಹಾಸನ್ ಅವರ ಟೆಸ್ಟ್ ಜೀವನವನ್ನು ನೋಡುವುದಾದರೆ,

ಟೆಸ್ಟ್ ಆವೃತ್ತಿಯಲ್ಲಿ ಇವರು ಆಡಿರುವ 70 ಪಂದ್ಯಗಳಲ್ಲಿ ಬಾಂಗ್ಲಾದೇಶದ ಪರ 128 ಇನ್ನಿಂಗ್ಸ್ ಗಳಲ್ಲಿ ಬ್ಯಾಟ್ ಬೀಸಿರುವ ಇವರು ಬರೋಬ್ಬರಿ 4,600ಕ್ಕೂ ಹೆಚ್ಚು ರನ್ ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಐದು ಶತಕಗಳು ಹಾಗೂ 31 ಅರ್ಧಶತಗಳು ಸಹ ಸೇರಿವೆ. ಇನ್ನು ಬೌಲಿಂಗ್ ನಲ್ಲಿ ಬಾಂಗ್ಲಾದೇಶದ ಪರ 119 ಇನ್ನಿಂಗ್ಸ್ ಗಳಲ್ಲಿ ಬೌಲ್ ಮಾಡಿರುವ ಇವರು 242 ವಿಕೆಟ್ಗಳನ್ನು ಕಬಳಿಸಿದ್ದಾರೆ.

ಇನ್ನು ಇವರ ಟಿ20 ಸಾದನೆಯನ್ನು ನೋಡುವುದಾದರೆ,

ಟಿ20 ಯಲ್ಲಿ 129 ಪಂದ್ಯಗಳನ್ನು ಆಡಿರುವ ಶಕೀಬ್, 2551 ರನ್ ಗಳನ್ನು ಕಲೆ ಹಾಕಿದ್ದಾರೆ. ಬಾಲ್ ಮೂಲಕ 149 ವಿಕೇಟ್ ಕಬಳಿಸಿದ್ದಾರೆ. ಈ ಮೂಲಕಬಾಂಗ್ಲಾದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.


Share It

You cannot copy content of this page