ಬೆಂಗಳೂರು: ಮುಂದಿನ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೇಸ್ ಮಾರ್ಕ್ಸ್ ಕೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಮುಂದಿನ ವರ್ಷದಿಂದ 10ನೇ ತರಗತಿ ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ನೀಡುವುದಿಲ್ಲ ಎಂದರು.
ಈ ವರ್ಷ 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಒಟ್ಟಾರೆ ಫಲಿತಾಂಶ ಶೇ73.40 ರಾಜ್ಯ ಪಡೆದಿತ್ತು ಕಳೆದ ವರ್ಷ ಶೇ.83 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ 2288 ಶಾಲೆಗಳು ಶೇ.100 ರಷ್ಡು ಫಲಿತಾಂಶ ಪಡೆದಿವೆ. ಈ ಫಲಿತಾಂಶದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದ್ದರು.
ಗ್ರೇಸ್ ಮಾಕ್ಸ್೯ನಿಂದ ಅನುತ್ತೀರ್ಣಗೊಳ್ಳುವ ಅಂಚಿನಲ್ಲಿದ್ದ ವಿದ್ಯಾರ್ಥಿಗಳಿಗೆ ಇದು ವರದಾನವಾಗಿದೆ. ಶೇ5-10ರಷ್ಟು ಕೃಪಾಂಕ ನೀಡುತ್ತಿದ್ದ ಮಂಡಳಿಯು ಈ ವರ್ಷ ಇದರ ಪ್ರಮಾಣವನ್ನು ಶೇ20 ರಷ್ಟು ಹೆಚ್ಚಳ ಮಾಡಿತ್ತು.