ಅನೈತಿಕ ಸಂಬಂಧ: ಪಾವಗಡದಲ್ಲಿ ಜೋಡಿ ಆತ್ಮಹತ್ಯೆ
ಪಾವಗಡ: ಅನೈತಿಕ ಸಂಬಂಧ ಮನೆಗೆ ತಿಳಿದಿದೆ ಎಂಬ ಅನುಮಾನದಲ್ಲಿ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಗೋವಿಂದ ರೆಡ್ಡಿ ಹಾಗೂ ತಮಿಳುನಾಡು ಮೂಲಕ ….ಆತ್ಮಹತ್ಯೆ ಮಾಡಿಕೊಂಡವರು. ಗೋವಿಂದ ರೆಡ್ಡಿ ಬೆಂಗಳೂರಿನಲ್ಲಿ ಎಳನೀರು ವ್ಯಾಪಾರ ಮಾಡಿಕೊಂಡಿದ್ದು, ತಮಿಳುನಾಡಿನ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಈ ವಿಷಯ ಮನೆಯವರಿಗೆ ಗೊತ್ತಾಗಿದೆ ಎಂಬ ಆತಂಕದಲ್ಲಿ ಇಬ್ಬರು ಮನೆಯಿಂದ ಪರಾರಿಯಾಗಿದ್ದರು.
ಡಿ. 19 ರಂದು ಬೆಂಗಳೂರು ತೊರೆದು ಪಾವಗಡಕ್ಕೆ ಆಗಮಿಸಿದ್ದ ಜೋಡಿ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದೆ. ಆತ್ಮಹತ್ಯೆ ಮಾಡಿಕೊಂಡಿದ್ದ ಜೋಡಿ ಶವಗಳನ್ನು ನೋಡಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಹಿತಿ ಕಲೆಹಾಕಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.