ಅಪರಾಧ ಉಪಯುಕ್ತ ಸುದ್ದಿ

ಗ್ಯಾರಂಟಿ ಪರಿಷ್ಕರಣೆಯ ಮೊದಲ ಹೆಜ್ಜೆ: ಅಕ್ರಮ ರೇಷನ್ ಕಾರ್ಡ್ ಪಡೆದವರ ಮೇಲೆ ಕ್ರಿಮಿನಲ್ ಕೇಸ್

Share It


ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ರಾಜ್ಯಸರ್ಕಾರ ಬಿಗ್ ಶಾಕ್ ನೀಡಿದೆ.
ಏಕೆಂದರೆ ಅನರ್ಹ ಬಿಪಿಎಲ್ ಕಾರ್ಡ್ ದಾರರನ್ನು ಗುರುತಿಸುವ ಕಾರ್ಯವನ್ನು ರಾಜ್ಯಸರ್ಕಾರ ಕೈಗೆತ್ತಿಕೊಂಡಿದೆ.

ಈ ಹಿಂದೆಯೇ ಬಿಪಿಎಲ್ ಕಾರ್ಡ್ ಪಡೆಯಲು ಕೆಲವು ನಿಬಂಧನೆಗಳನ್ನು ಸರಕಾರ ವಿಧಿಸಿತ್ತು. ಇದನ್ನು ಮೀರಿಯೂ ಲಕ್ಷಾಂತರ ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನು ಪಡೆಯಲಾಗಿದೆ. ಇದಕ್ಕೆ ಕಡಿವಾಣ ಹಾಕಲು ಸರಕಾರ ಮುಂದಾಗಿದ್ದು, ಸರ್ವೇ ನಡೆಸಲು ಸಜ್ಜಾಗಿದೆ.

ತೆರಿಗೆ ಪಾವತಿ ಮಾಡುವವರು, ಸರಕಾರಿ, ಅರೆಸರಕಾರಿ ನೌಕರರು, ಮನೆ ಬಾಡಿಗೆ ಕೊಡುವ ಮಾಲೀಕರು, ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ಹೊಂದಿರಬಾರದು. 7.5 ಎಕರೆಗಿಂತ ಹೆಚ್ಚು ಜಮೀನು ಉಳ್ಳವರು ಕೂಡ ಅನರ್ಹರಾಗುತ್ತಾರೆ. ಅಕಸ್ಮಾತ್ ಇಂತಹ ಸವಲತ್ತುಗಳನ್ನು ಹೊಂದಿರುವವರು ಕಾರ್ಡ್ ಹಿಂದುಗಿಸಲು ಅವಕಾಶ ನೀಡಲಾಗಿದೆ.

ಸ್ವಯಂಪ್ರೇರಿತವಾಗಿ ಕಾರ್ಡ್ ವಾಪಸ್ ಕೊಟ್ಟು, ಈವರೆಗೆ ಸರ್ಕಾರ ಅನ್ನಭಾಗ್ಯ ಯೋಜನೆಯ ಅಡಿ ಬಿಪಿಎಲ್ ಕಾರ್ಡ್ ಗೆ ನೀಡಿದ್ದ ಉಚಿತ ಅಕ್ಕಿಯ ಹಣವನ್ನು ಕಡ್ಡಾಯವಾಗಿ ಹಿಂತಿರುಗಿಸಲೇಬೇಕು. ಒಂದು ವೇಳೆ ಹಿಂದುರಿಗಿಸದೆ ಕಳ್ಳಾಟ ಆಡಿದರೆ, ಕ್ರಿಮಿನಲ್ ಮೊಕದ್ದಮೆ ಹೂಡಲು ತೀರ್ಮಾನಿಸಿದೆ.

ಶಕ್ತಿ ಯೋಜನೆ ಹೊರತುಪಡಿಸಿ ಕೆಲ ಗ್ಯಾರಂಟಿ ಯೋಜನೆಯನ್ನು ಬಿಪಿಎಲ್ ಕಾರ್ಡ್ ಉಳ್ಳವರಿಗೆ ನೀಡಲಾಗುತ್ತಿದೆ. ಆದರೆ, ಅನರ್ಹರು ಕಾರ್ಡ್ ಹೊಂದಿರುವ ಕಾರಣದಿಂದ ಉಚಿತ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ ಎಂಬ ಆರೋಪವಿದೆ. ಹೀಗಾಗಿ, ಅನರ್ಹ ಕಾರ್ಡ್ ದಾರರನ್ನು ಗುರುತಿಸಿ, ಕಾರ್ಡ್ ರದ್ದು ಮಾಡಿದರೆ, ಗ್ಯಾರಂಟಿ ಹೊರೆಯೂ ತಗ್ಗಲಿದೆ.

ಯಾರಿಗೆಲ್ಲ ಬಿಪಿಎಲ್ ಕಾರ್ಡ್ ಸಿಗಲ್ಲ

  • ರಾಜ್ಯದಲ್ಲಿ ಸರ್ಕಾರಿ, ಅರೆಸರ್ಕಾರಿ ನೌಕರಿ ಪಡೆದಿರುವ ವ್ಯಕ್ತಿಯ ಕುಟುಂಬ
  • ಮನೆಯ ಯಾವುದೇ ಒಬ್ಬ ವ್ಯಕ್ತಿ ಆದಾಯ ತೆರಿಗೆ, ಜಿಎಸ್ಟಿ ಪಾವತಿ ಮಾಡುವವರಾಗಿದ್ದರೆ
  • ನಗರ ಪ್ರದೇಶಗಳಲ್ಲಿ ಮನೆ ಬಾಡಿಗೆ ಕೊಡುತ್ತಿರುವರುವ ಮಾಲೀಕರಿಗೆ
  • ಗ್ರಾಮೀಣ ಭಾಗದಲ್ಲಿ 7.5 ಎಕರೆಗಿಂತ ಅಧಿಕ ಪ್ರಮಾಣದ ಜಮೀನು ಹೊಂದಿರುವ ಮಾಲೀಕರು

Share It

You cannot copy content of this page