ನೀಲಿ ನಾಲಿಗೆ ಇರೋ ಪ್ರಾಣಿ ನೋಡಿದ್ದೀರಾ! ಹಾವಿಂನಂತೆ ಕಾಣುವ ಇದನ್ನು ನೋಡಿದ್ರೆ ಭಯ ಆಗೋದು ಪಕ್ಕಾ!
ಭೂಮಿಯಲ್ಲಿ ಹುಟ್ಟಿದ್ದ ಪ್ರತಿ ಜೀವಿಯು ತನ್ನದೇ ಆದ ಆಕಾರ, ಬಣ್ಣ, ಜೀವನ ಶೈಲಿ ಹೊಂದಿರುತ್ತದೆ. ಒಂದನ್ನು ಹೋಲುವಂತೆ ಮತ್ತೊಂದು ಜೀವಿ ಇರಲು ಸಾದ್ಯವಿಲ್ಲ. ನಾವು ಸಾಮಾನ್ಯವಾಗಿ ಬಿಳಿ ಬಣ್ಣದ, ಹಸಿರು ಬಣ್ಣದ ನಾಲಿಗೆಯನ್ನು ಹೊಂದಿರುವ ಪ್ರಾಣಿಯನ್ನು ನೋಡಿರುತ್ತೇವೆ ಅಲ್ಲವೇ, ಆದ್ರೆ ಇಲ್ಲೊಂದು ಪ್ರಾಣಿಗೆ ನೀಲಿ ಬಣ್ಣದ ನಾಲಿಗೆ ಇದೆ ಅಂದ್ರೆ ನೀವು ನಂಬುತ್ತೀರಾ. ಆಗಿದ್ರೆ ಈ ಬಗ್ಗೆ ತಿಳಿಯೋಣ ಬನ್ನಿ.
ನೀಲಿ ನಾಲಿಗೆಯನ್ನು ಹೊಂದಿರುವ ಪ್ರಾಣಿಯೇ ಸ್ಕಿಂಕ್ಸ್. ಈ ಪ್ರಾಣಿಯು ಹಲ್ಲಿಯ ಜಾತಿಗೆ ಸೇರಿದ್ದು 2 ಅಡಿಯಷ್ಟು ಉದ್ದವಿರುತ್ತದೆ. ಇದು ಮಾನವ ಸ್ನೇಹಿಯಾಗಿದ್ದು ನಮ್ಮ ಮನೆಗಳಲ್ಲಿಯೂ ಸಾಕಬಹುದಾದ ಪ್ರಾಣಿಯಾಗಿದೆ.
ಇವುಗಳು ಸುಮಾರು 30 ವರ್ಷಗಳವರೆಗೆ ಬದುಕುತ್ತವೆ. 2 ಅಡಿಯಷ್ಟು ಉದ್ದವಾಗಿರುವ ಇವುಗಳು ಅರ್ಧ ಕೆಜಿ ತೂಕವಿರುತ್ತವೆ. ಥಟ್ಟನೆ ನೋಡಿದಾಗ ಹಾವಿನ ರೀತಿ ಕಾಣುತ್ತವೆ. ಹಳದಿ ಕೆಂಪು ಮಿಶ್ರಿತ ಬಣ್ಣದಿಂದ ಕೂಡಿರುತ್ತದೆ. ಭಾಗಶಃ ಹಲ್ಲಿಯನ್ನು ಹೋಲುತ್ತದೆ.
ಇವುಗಳು ಚಿಕ್ಕ ಕಾಲುಗಳನ್ನು ಹೊಂದಿರುತ್ತದೆ. ಇವುಗಳ ನಾಲಿಗೆಯ ಬಣ್ಣ ನೀಲಿಯಾಗಿದ್ದು ಬೆಳಕಿಗೆ ಇವುಗಳ ನಾಲಿಗೆ ಪ್ರತಿಫಲನ ನೀಡುತ್ತದೆ. ಇದು ಇವುಗಳನ್ನು ಇತರ ಪರಭಕ್ಷಕ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ತನ್ನ ಇತರ ಕುಟುಂಬದ ಸದಸ್ಯರೊಂದಿಗೆ ಸಂವಹನ ನಡೆಸಲು ನಾಲಿಗೆಯು ಸಹಕಾರಿಯಾಗುತ್ತದೆ.
ಈ ಪ್ರಾಣಿಯು ಆಸ್ಟ್ರೇಲಿಯಾ, ನ್ಯೂ ಗಯಾನಾ ಮತ್ತು ಇಂಡೋನೇಷ್ಯಾದಲ್ಲಿ ಕಂಡುಬರುತ್ತದೆ. ಇವುಗಳು ತಮ್ಮ ಆಹಾರಕ್ಕಾಗಿ ಹಣ್ಣುಗಳು , ಹೂವುಗಳನ್ನು ತಿನ್ನುತ್ತವೆ. ಇವುಗಳು ತುಸು ತಾಳ್ಮೆಯ ಸ್ವಭಾವದವು. ತುಂಬ ರಹಸ್ಯವಾಗಿ ಭೇಟಿಯಾಡುವ ಕಲೆಯನ್ನು ಇವುಗಳು ಹೊಂದಿರುತ್ತವೆ.
ಇವುಗಳು ನಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ತಮ್ಮ ಒಡಹುಟ್ಟಿದವರೊಂದಿಗೆ ಎಂದಿಗೂ ಸಂಪರ್ಕದಲ್ಲಿ ಇರುವುದಿಲ್ಲ. ಈ ಬಗ್ಗೆ ಇನ್ನು ವಿಜ್ಞಾನಿಗಳಿಗೆ ಉತ್ತರ ಸಿಕ್ಕಿಲ್ಲ. ಆದ್ರೆ ಇವು ಒಂದೇ ಹೆಣ್ಣು ಸ್ಕಿಂಕ್ಸ್ ಜೊತೆ ಮಾತ್ರ ಬದುಕುತ್ತದೆ ಎಂದು ತಿಳಿದು ಬಂದಿದೆ.


